ಬೆಳಗಾವಿ: ವೇತನ ಪರಿಷ್ಕರಣೆ, ವೇತನ ಪರಿಷ್ಕರಣೆ ಬಾಕಿ ಹಣ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗಸ್ಟ್ 5ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ ನಾಗೇಶ್ ಸಾತೇರಿ ಹೇಳಿದರು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 42;
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಸಾರಿಗೆ ನೌಕರರಿಗೆ ಶಕ್ತಿ ತುಂಬುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು. ಅದರಂತೆ 2020ರಿಂದ ಅನ್ವಯವಾಗುವಂತೆ 2023ರಲ್ಲಿ ಪರಿಷ್ಕರಿಸಲಾಗಿತ್ತು. 2024ಕ್ಕೆ ಮತ್ತೆ ವೇತನ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ಮಾಡಿಲ್ಲ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಈ ಹಿಂದಿನ ಶೇ 15 ರಷ್ಟು ವೇತನ ಪರಿಷ್ಕರಣೆ 38 ತಿಂಗಳ ಬಾಕಿ ಹಣವನ್ನು ಸರ್ಕಾರ ನೀಡಬೇಕು. ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ ಶೇ.25 ರಷ್ಟು ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
2023ರಲ್ಲಿ ವೇತನ ಪರಿಷ್ಕರಣೆಯಾಗಿದ್ದು, 2027ಕ್ಕೆ ಮುಂದಿನ ಒಪ್ಪಂದ. ಸರ್ಕಾರದಿಂದ ಯಾವುದೇ ಬಾಕಿ ಹಣ ಕೊಡಬೇಕಿಲ್ಲ ಎಂದು ಹೇಳಿ ನಿಗಮದ ನೌಕರರಿಗೆ ಸರ್ಕಾರ ಆಘಾತ ನೀಡಿದೆ ಎಂದು ನಾಗೇಶಿ ಸಾತೇರಿ ಬೇಸರ ಹೊರ ಹಾಕಿದರು.
ಆಗಸ್ಟ್ 5ರಂದು ಬೆಳಿಗ್ಗೆ ಆರು ಗಂಟೆಯಿಂದ ಯಾವುದೇ ಬಸ್ ಗಳು ಸಂಚರಿಸುವುದಿಲ್ಲ. ನಾವು ಯಾರೂ ಅವತ್ತು ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶ ಅಲ್ಲ. ಆದರೆ, ನಮ್ಮ ಬೇಡಿಕೆ ಈಡೇರಲು ಹೋರಾಟ ಅನಿವಾರ್ಯ ಎಂದು ನಿರ್ವಾಹಕ ಸುರೇಶ ಯರಡ್ಡಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾರಿಗೆ ನೌಕರರಾದ ಸಿ. ಎಸ್. ಬಿಡ್ನಾಳ, ರಾಜು ಪನ್ಯಾಗೋಳ, ಗಿರೀಶ ಕಾಂಬಳೆ, ಪ್ರಕಾಶ ಸಿದ್ನಾಳ, ಸಿದ್ರಾಯಿ ಶೀಗಿಹಳ್ಳಿ, ಈರಣ್ಣ ಮದವಾಲ, ಡಿ.ಎನ್ ಕಾಂಬಳೆ, ವಿ.ವಿ.ಚಿಕ್ಕಮಠ ಸೇರಿ ಮತ್ತಿತರರು ಇದ್ದರು.