ಬೆಳಗಾವಿ: ಗಾಂಧಿನಗರ ಹಾಗೂ ಅಮನ್ ನಗರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಓವರ್ ಬ್ರೀಜ್ ಅನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ, ಭೀಮ್ ಆರ್ಮಿ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (0.42342573, 0.5097502);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 47;
ಬೆಳಗಾವಿಯ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಿಂದ ಜಿಲ್ಲಾಕಚೇರಿ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ರೈಲ್ವೆ ಗೇಟ್ ಬಳಿ ರಸ್ತೆ ವಿಸ್ತರಣೆ ಮಾಡಬೇಕು. ಭಾರೀ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಬೈಪಾಸ್ ಮಾಡಬೇಕು. ಟ್ರಾಫಿಕ್ ನಿಯಂತ್ರಣಕ್ಕೆ ಸಿಗ್ನಲ್ ಹಾಗೂ ಪೋಲಿಸ್ ವ್ಯವಸ್ಥೆ ಮಾಡಬೇಕ. ಗಾಂಧಿ ನಗರದಿಂದ 1ರಿಂದ2 ಕಿಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ದೊಡ್ಡ ವಾಹನಗಳನ್ನು ಅಲ್ಲಿ ತಿರುಗಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು
ಪಾದಚಾರಿ ಮಾರ್ಗ, ಜೈಬ್ರಾ ಕ್ರಾಸಿಂಗ್ ಹಾಗೂ ಸ್ಪೀಡ್ ಬ್ರೇಕರ್ ವ್ಯವಸ್ಥೆ ಮಾಡಬೇಕು.ರೈಲ್ವೆ ಗೇಟ್ ಬಳಿ ಡಿವೈಡರ್ ನಿರ್ಮಿಸಬೇಕು.ಯಾವುದೇ ಯೋಜನೆಯ ಜಾರಿ ಮುನ್ನ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ಈ ಭಾಗದಲ್ಲಿ ಅಂಡರಗೌಂಡ್ ಬ್ರಿಡ್ಜ್ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.