ಬೆಳಗಾವಿ: ಸಾಂಬ್ರಾ ಗ್ರಾಮದಲ್ಲಿ ಹೋಮಿಯೋಪಥಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ.ಸ್ಥಳೀಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಗ್ರಾಮೀಣ ಜನತೆಗೆ ಸುಲಭವಾಗಿ ಚಿಕಿತ್ಸೆ ಲಭ್ಯವಾಗುವಂತೆ ಸಾಂಬ್ರಾ ಗ್ರಾಮದಲ್ಲಿ ಪ್ರತಿ ವಾರ ನಡೆಸಲಾಗುವ ಹೋಮಿಯೋಪಥಿ ಆರೋಗ್ಯ ತಪಾಸಣಾ ಶಿಬಿರಕ್ಕೆ ಸೆಪ್ಟೆಂಬರ್ 18 2025 ರಂದು ಚಾಲನೆ ನೀಡಲಾಯಿತು.
ಈ ಶಿಬಿರದ ಮೂಲಕ ಗ್ರಾಮಸ್ಥರಿಗೆ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ರಾಜು ದೇಸಾಯಿ, ಗ್ರಾಮ ಪಂಚಾಯತ್ ಅಧ್ಯಕ್ಶೆ ರಚನಾ ಗೌಡರ್, PDO ಶ್ರೀ ಸಿದ್ದಲಿಂಗ ಸರೂರ, ಸಮಾಜ ಸೇವಕರು ಶ್ರೀ ವೈ.ಕೆ. ಧರ್ಮೋಜಿ, ನಿವೃತ್ತ ಜ್ಯೋತಿ ಕಾಲೇಜು ಪ್ರಾಂಶುಪಾಲರು ಶ್ರೀ ಎ.ಎ. ಗೋರ್ಪಡೆ, ಕೆಎಲ್ಇ ಹೋಮಿಯೋಪಥಿಕ್ ಕಾಲೇಜಿನ ನಿರ್ದೇಶಕರು ಡಾ. ಎಂ.ಎ. ಉಡಚನಕರ ಹಾಗೂ ಶಿಬಿರದ ಮುಖ್ಯಸ್ಥರಾದ ಡಾ. ಚೇತನ ಅವರುಗಳು ಪಾಲ್ಗೊಂಡಿದರು.
ಈ ಶಿಬಿರದ ಆಯೋಜನೆಯಿಂದ ಗ್ರಾಮಸ್ಥರು ಆರೋಗ್ಯ ಜಾಗೃತಿ ಹೊಂದಿ, ಹೋಮಿಯೋಪಥಿ ಚಿಕಿತ್ಸೆಯ ಲಾಭ ಪಡೆಯಲು ಸಾಧ್ಯವಾಗಲಿದೆ ಎಂದು ಆಯೋಜಕರು ತಿಳಿಸಿದರು.