ಬೆಳಗಾವಿ: ಅನೇಕ ಸ್ವಾತಂತ್ರ್ಯ ಯೋಧರ ಮಹಾನ್ ಪುರುಷರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರಕಿದೆ ಎಂದು ಆಡಳಿತ ಮಂಡಳಿ ಸದಸ್ಯ ಬಿ ಪಿ ಲಮಾಣಿ ಎಂದು ಹೇಳಿದರು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಹವಾಸಿ ಪ್ರೌಢ ಶಾಲೆ ಹಾಗೂ ಕೆ ಎಸ್ ಆರ್ ಶಿಕ್ಷಣ ಮಹಾವಿಧ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತೀ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.
ದೇಶ ಭಕ್ತಿ, ದೇಶ ಪ್ರೇಮ, ಸೋದರತ್ವ, ಭಾವೈಕ್ಯತೆ, ಸರ್ವಧರ್ಮ, ಸಹಿಷ್ಣುತೆ, ತ್ಯಾಗ, ಬಲಿದಾನ ಮುಂತಾದುವುಗಳನ್ನು ನಮ್ಮ ನಾಡಿನ ವಿದ್ಯಾರ್ಥಿ/ನಿಯರಲ್ಲಿ ದೇಶ ಭಕ್ತಿ ಕಡಿಮೆ ಆಗುತ್ತಿದೆ. ಇಡೀ ಭಾರತವೇ ಒಂದು ಕುಟುಂಬ -ನಾವೆಲ್ಲಾ ಸಹೋದರರು ಎಂಬ ಭಾವನೆ ಮುಂದಿನ ನಾಗರಿಕರು ನಾಯಕರಾಗಲಿರುವ ಬಾಲಕ ಬಾಲಕಿಯರಲ್ಲಿ ಒಡಮೂಡಿಸಿ ಬೆಳೆಯುವಂತೆ ಬೆಳೆಸಬೇಕು ಎಂದರು.
ಮುಖ್ಯೋಪಾಧ್ಯಾಯ ಬಿ.ಎಮ್.ಮಠ, ಮತ್ತು ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಮ್ ಸುಣಗಾರ, ಇವರು ಸಾಮೂಹಿಕವಾಗಿ ಧ್ವಜ ನೆರವೇರಿಸಿದರು. ನಂತರ ಶಾಲಾ ಬಾಲಕ ಬಾಲಕಿಯರಿಂದ ಭಾಷಣ ದೇಶ ಭಕ್ತಿ ಗೀತೆ ಹಾಡಿದರು. ಸ್ವಾತಂತ್ರ್ಯ ಯೋಧರ ಛದ್ಮವೇಷ ಎಲ್ಲರ ಗಮನ ಸೆಳೆಯಿತು ಸ್ವಾತಂತ್ರೋತ್ಸವದ ನಿಮಿತ್ಯ ನಡೆಸಿದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ, ಎರಡು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ,ನಿಯರು ಹಾಗೂ ಪ್ರಶಿಕ್ಷಣಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.