ಬೆಳಗಾವಿ: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರದ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆಯ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲಿಸಿದರು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 41;
ನಗರದ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಯಾವುದೇ ರೀತಿಯ ಸಾಕ್ಷಿ ಆಧಾರಗಳು ಇಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಧರ್ಮ ವಿರೋದಿಗಳ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಅನಾಮಿಕ ವ್ಯಕ್ತಿ ಯಾರು ಎಂಬುದು ಎಲ್ಲರಿಗೂ ತಿಳಿಯಬೇಕು. ಕೂಡಲೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಸುಳ್ಳು ಪ್ರಚಾರ ಗಿಟ್ಟಿಸಲು ಹೊರಟಿರುವ ಆತನ ಹಿಂದೆ ಯಾರಿದ್ದಾರೆ. ಇದರ ಹಿಂದೆ ಯಾರ ಷಡ್ಯಂತ್ರವಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಎಂದು ಆಗ್ರಹಿಸಿದರು.
ನಾವು ಧರ್ಮಸ್ಥಳದೊಂದಿಗೆ ಇದ್ದೇವೆ. ಧರ್ಮಸ್ಥಳಕ್ಕೆ ಜಯವಾಗಲಿ, ವೀರೇಂದ್ರ ಹೆಗ್ಗಡೆಯವರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿರುವವರಿಗೆ ಧಿಕ್ಕಾರ ಎನ್ನುತ್ತಾ ಧರ್ಮಸ್ಥಳ ಭಕ್ತಾಭಿಮಾನಿಗಳು ಮರೆವಣಿಗೆ ನಡೆಸಿದರು.
ಧರ್ಮಸ್ಥಳ ಕುರಿತು ಕೆಲವು ಷಡ್ಯಂತ್ರ ನಡೆಸುತ್ತಿದ್ಧಾರೆ. ಈ ಕುರಿತು ತನಿಖೆಗೆ ನ್ಯಾಯಾಧೀಶರ ನೇತೃತ್ವದ ತಂಡ ರಚಿಸಬೇಕು. ಷಡ್ಯಂತ್ರ ನಡೆಸುತ್ತಿರುವವರ ಹಿಂದಿರುವ ಪ್ರಚೋದನೆ, ಇತ್ಯಾದಿ ಪತ್ತೆ ಹಚ್ಚಿ ಸತ್ಯಾಂಶ ಬಯಲಿಗೆಳೆಯಬೇಕು ಎಂದು ಗಂಗಾಧರ ಸೋನಾರ್ ಹೇಳಿದರು.
ಬಿಜೆಪಿ ಯುವ ಮುಖಂಡ ಮಹಾಂತೇಶ ವಕುಂದ, ಅನುಶ್ರೀ ಹಿರೇಮಠ, ವಂದನಾ ಟೋಸು, ಗೀತಾ ಹೊಸಮನೀ , ಆಶಾ ಉಪ್ಪಿನ , ಶಿವಲಿಲ್ಲಾ ಹವಾಲ್ದಾರ್,