ಬೆಳಗಾವಿ: ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ರೈತರಿಗೆ ತಕ್ಷಣ ಯೂರಿಯಾ ಗೊಬ್ಬರ ವಿತರಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗು ಹಸಿರು ಸೇನೆ ವತಿಯಿಂದ ಸೋಮವಾರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 45;
ನಗರದ ಜಿಲ್ಲಾಧಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗು ಹಸಿರು ಸೇನೆ ತಾಲೂಕು ಅಧ್ಯಕ್ಷ ರಾಜು ಮರವೇ ಮಾತನಾಡಿ, ಮೇ ತಿಂಗಳಿನಲ್ಲಿ ಅತಿವೃಷ್ಟಿಯಾಗಿ ಬಿತ್ತನೆ ಕೂಡ ಸರಿಯಾಗಿ ಆಗಲಿಲ್ಲ ಆದ್ದರಿಂದ ಕೃಷಿ ಭೂಮಿಯಲ್ಲಿ ಮೊಳಕೆ ಮೇಲೆ ನೀರು ನಿಂತು ಇಡೀ ಬೆಳೆ ನಷ್ಟವಾಗಿದು, ಮೊದಲೇ ಕೃಷಿ ಭೂಮಿ ತಂಪಾಗಿದ್ದು ಅದರಲ್ಲಿ ಮಳೆ ಕೂಡ ಹೆಚ್ಚಾಗಿದು, ಬೆಳೆ ಚೆನ್ನಾಗಿ ಬೆಳೆಯಲು ಯೂರಿಯಾ ಗೊಬ್ಬರ ಅವಶ್ಯವಾಗಿದೆ. ಆದರೆ ಇವಾಗ ರೈತರಿಗೆ ಯೂರಿಯ ಗೊಬ್ಬರವೇ ಸಿಗುತ್ತಿಲ್ಲ ಆದ್ದರಿಂದ ಬೆಳೆ ನಾಶವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದರು.
ಗೊಬ್ಬರ ಅಂಗಡಿ ಹಾಗೂ ಇತರೆ ಕೃಷಿ ಸೊಸೈಟಿಗಳಲ್ಲಿ ಕೊಂಡುಕೊಳ್ಳಲು ಹೋದರೆ ಅವರು ಆ ಗೊಬ್ಬರದ ಜೊತೆಗೆ ಇತರೆ ಕೃಷಿಗೆ ಸಂಬಂಧಪಟ್ಟ ವಸ್ತುಗಳನ್ನು ತೆಗೆದುಕೊಳ್ಳಲೇಬೇಕೆಂದು ರೈತರಿಗೆ ದಬ್ಬಾಳಿಕೆ ಮಾಡುತ್ತಿದ್ದಾರೆ.
ರೈತರು ಹೆಚ್ಚುವರಿ ಹಣವನ್ನು ಗೊಬ್ಬರ ಅಂಗಡಿ ಹಾಗೂ ಕೃಷಿ ಸೊಸೈಟಿಗಳಿಗೆ ನೀಡಬೇಕಾಗುತ್ತದೆ. ಅವರನ್ನು ಪ್ರಶ್ನಿಸಿದರೆ ಅವರು ಇದು ಸರ್ಕಾರದ ನಿಯಮವೆಂದು ನಮಗೆ ಹೇಳುತ್ತಿದ್ದಾರೆ.
ಈಗ ಬೆಳೆಗಳಿಗೆ ಯೂರಿಯಗೊಬ್ಬರ ತುಂಬಾ ಅವಶ್ಯಕವಿದೆ. ಸರ್ಕಾರ ಯೂರಿಯಗೊಬ್ಬರವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.