ಬೆಳಗಾವಿ : ಆಶಾ ಕಾರ್ಯಕರ್ತೆಯರಿಗೆ 10. ಸಾವಿರ ರೂ.ವರೆಗೆ ಗೌರವಧನ ಹೆಚ್ಚಿಸುವಂತೆ ಸರಕಾರ ಭರವಸೆ ನೀಡಿತ್ತು . ಆದರೆ ಇದೀಗ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಬೃಹತ್ ಮೆರವಣಿಗೆ ಮೂಲಕ ತೆರಳಿದ ಆಶಾ ಕಾರ್ಯಕರ್ತೆ ಯರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ 10. ಸಾವಿರ ರೂ. ಗಳ ಗೌರವಧನ ಒದಗಿಸಬೇಕು. ಇದನ್ನು ಹೊರತುಪಡಿಸಿ, ಹೆಚ್ಚುವರಿ ಕೆಲಸದ ಆ ಧಾರದ ಮೇಲೆ ಇನ್ಸೆಂಟಿವ್ ಕೂಡ ಕೊಡಬೇಕು. ಇನ್ಸೆಂಟಿವ್ ಕಡಿಮೆ ಬಂದಲ್ಲಿ, ಬರದೇ ಇದ್ದಂತಹ ಆಶಾ ಕಾರ್ಯಕರ್ತೆಯರಿಗೆ, ಸರಕಾರವೇ ವ್ಯತ್ಯಾಸದ ಹಣ ಪಾವತಿಸುವ ಮೂಲಕ ಪ್ರತಿ ತಿಂಗಳಿಗೆ ಒಟ್ಟು 10. ಸಾವಿರ ರೂ. ದೊರೆಯುವಂತೆ ಸರಕಾರ ಆದೇಶಿಸಬೇಕೆಂದು ಆಗ್ರಹಿಸಿದರು.