ಈಜಿಪ್ಟ್: ಈಜಿಪ್ಟ್ ರಾಜಧಾನಿಯ ನೈಲ್ ನಲ್ಲಿ ದಿನಗೂಲಿ ನೌಕರರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಸುಮಾರು 10 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಿಜಾದ ಮೊನ್ಶಾತ್ ಎಲ್-ಕನಾಟರ್ ಪಟ್ಟಣದಲ್ಲಿ ದೋಣಿ ಮಗುಚಿ ಬಿದ್ದಿದೆ. ದೋಣಿಯಲ್ಲಿ ಸುಮಾರು 15 ದಿನಗೂಲಿ ನೌಕರರಿದ್ದರು. ಅವರನ್ನು ಸ್ಥಳೀಯ ನಿರ್ಮಾಣ ಕೆಲಸಕ್ಕೆ ಕಳುಹಿಸಲಾಗಿತ್ತು. ಈ ವೇಳೆ ದೋಣಿ ಅಪಘಾತ ಸಂಭವಿಸಿದೆ. ರಕ್ಷಣಾ ಪಡೆಗಳು ಮೃತ ದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ.
ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಈಜಿಪ್ಟ್ ಪರಿಹಾರ ನೀಡಲು ಮುಂದಾಗಿದೆ. ಮೃತರ ಕುಟುಂಬಕ್ಕೆ 5 ಲಕ್ಷ 35 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಬದುಕುಳಿದವರಿಗೆ 50,000 ರೂ. ಪರಿಹಾರವನ್ನು ನೀಡಲಾಗಿದೆ.