Tuesday, December 24, 2024
Google search engine
Homeರಾಜಕೀಯಪ್ರತಾಪ್ ಸಿಂಹ ಅಯೋಗ್ಯ, ಮುಠ್ಠಾಳ  ಎಂದ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಕೇಸ್ ದಾಖಲು

ಪ್ರತಾಪ್ ಸಿಂಹ ಅಯೋಗ್ಯ, ಮುಠ್ಠಾಳ  ಎಂದ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಕೇಸ್ ದಾಖಲು

ಮೈಸೂರು: ಪ್ರತಾಪ್ ಸಿಂಹ ಅಯೋಗ್ಯ, ಮುಠ್ಠಾಳ ಎಂದು ಏಕವಚನದಲ್ಲಿ ನಿಂದಿಸಿದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದೀಪ್ ಈಶ್ವರ್ ಪ್ರತಾಪ್ ಸಿಂಹ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸಿದ್ದಾರೆ. ಪ್ರತಾಪ್ ಸಿಂಹ ಅಯೋಗ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಬಾಯಿಗ್ ಬಂದ ಹಾಗೆ ಮಾತನಾಡಿದ್ದಾನೆ, ಇನ್ಮುಂದೆ ಆದರೂ ಬಾಯಿ ಮುಚ್ಚಿಕೊಂಡಿದ್ದರೆ ಸರಿ ಇಲ್ಲ ಎಂದರೆ ಇಡೀ ಕಾಂಗ್ರೆಸ್ ಪಾಳಯ ಮೈಸೂರಿಗೆ ಇಳಿಯಬೇಕಾಗುತ್ತದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದರು.

 

RELATED ARTICLES
- Advertisment -spot_img

Most Popular

error: Content is protected !!