Thursday, October 16, 2025
Google search engine
Homeರಾಜ್ಯಸಿಎಂ ಆಗಲು ಖರ್ಗೆ ಅತ್ಯಂತ ಅರ್ಹ ವ್ಯಕ್ತಿ.: ಸಚಿವ ಸಂತೋಷ ಲಾಡ್
spot_img

ಸಿಎಂ ಆಗಲು ಖರ್ಗೆ ಅತ್ಯಂತ ಅರ್ಹ ವ್ಯಕ್ತಿ.: ಸಚಿವ ಸಂತೋಷ ಲಾಡ್

ಬೆಳಗಾವಿ: ಸಿಎಂ ಆಗೋ ಅವಕಾಶ ಸಿಗಲಿಲ್ಲ ಎನ್ನುವ ಖರ್ಗೆ ಹೇಳಿಕೆ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಸಿದ  ಸಚಿವ ಸಂತೋಷ ಲಾಡ್ ಖರ್ಗೆ ಹೇಳಿಕೆಯನ್ನು ಯಾವ ರೀತಿ ಬೇಕಾದರು ಹೇಳಬಹದು. ಖರ್ಗೆಯವರು ಬೇರೆಯವರಿಗೆ ಉದಾಹರಣೆ ನೀಡಲು ಹೇಳಿದ್ದಾರೆ. ಇಂತಹ ಅವಕಾಶ ಮಿಸ್ ಆಗಿದರು ನಾನು ಎಐಸಿಸಿ ಅಧ್ಯಕ್ಷ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು

ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮ ಜೋತೆ ಮಾತನಾಡಿದ ಅವರು ಸಿಎಂ ಆಗಲು ಖರ್ಗೆ ಅವರು ಅತ್ಯಂತ ಅರ್ಹ ವ್ಯಕ್ತಿ. 2004ರಲ್ಲಿ ನಾನು ಅವರೊಟ್ಟಿಗೆ ಸದನದಲ್ಲಿ ಓಡಾಡುವ ಅವಕಾಶ ಸಿಕ್ಕಿತ್ತು. ಖರ್ಗೆಯವರು ಅತ್ಯಂತ ಪ್ರಾಮಾಣಿಕ, ಶಿಸ್ತುಬದ್ಧ ಸಂಸದೀಯ ಪಟ. ಅವರು ದೇಶದ ಎಲ್ಲಾ ಹುದ್ದೆ ಅಲಂಕರಿಸಲು ಅರ್ಹ ವ್ಯಕ್ತಿ ಎಂದು ಹೇಳಿದರು.

 91 ಅಸಂಘಟಿತ ಕಾರ್ಮಿಕ ವಲಯವನ್ನು ಸರ್ಕಾರ ಗುರುತಿಸಿ ಬೆಳಗಾವಿಯಲ್ಲಿ ಇಂದು ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುತ್ತೇವೆ ಹೊರ ಗುತ್ತಿಗೆ ಮೊದಲಿನಿಂದಲೂ ಇದು ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನಾವು ನೀಡುತ್ತೇವೆ. ರಾಜ್ಯದಲ್ಲಿ 20 ಲಕ್ಷ ನಕಲಿ ಕಾರ್ಡ್ ಕಮ್ಮಿ ಮಾಡಿದ್ದೇವೆ. ಅಂಬೇಡ್ಕರ್ ಸೇವೆ ಕೇಂದ್ರ ಶೀಘ್ರದಲ್ಲೇ ಆರಂಭಿಸುತ್ತೇವೆ. ಅರ್ಜಿ ಹಾಕಿದ ಅವರ ಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡುವುದರಿಂದ ನಕಲಿ ಕಾರ್ಡ್ ಗಳ ಸಂಖ್ಯೆ ಸಂಪೂರ್ಣ ಕಮ್ಮಿಯಾಗಿದೆ ಎಂದರು

ಜನಾರ್ದನ ರೆಡ್ಡಿ, ಶ್ರೀರಾಮುಲು ಒಂದಾದ ವಿಚಾರ ಕುರಿತು ಅವರಿಬ್ಬರು ಬಹಳ ವರ್ಷಗಳ ಸ್ನೇಹಿತರು‌. ನನಗು ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರಿಗೂ ಒಂದಾಗಿದ್ದು, ಒಳ್ಳೆಯದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!