ಬೆಳಗಾವಿ,ಫೆ.13 (ಸಮರ್ಥ ನಾಡು ಸುದ್ದಿ): ಜಿಲ್ಲೆಯಲ್ಲಿ ಜ.30 ರಿಂದ ಫೆ.13 ರವರೆಗೆ “ಸ್ಪರ್ಶ” ಕುಷ್ಠರೋಗ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು. ಗ್ರಾಮ ಪಂಚಾಯತಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸಮುದಾಯ ಗುಂಪುಗಳಲ್ಲಿ, ಸ್ವ ಸಹಾಯ ಸಂಘಗಳಲ್ಲಿ, ವಸತಿ ಶಾಲೆಗಳಲ್ಲಿ ಹಾಗೂ ಹಿಂದೂಳಿದ ಜನರಿಗೆ ಕುಷ್ಠರೋಗ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಗೀತಾ ಕಾಂಬಳೆ ತಿಳಿಸಿದ್ದರು.
ರಾಷ್ಟಿçÃಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳ ಕಛೇರಿ ಮತ್ತು ಹಿಂಡಲಗಾ ಕುಷ್ಠರೋಗ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ (ಫೆ.13) “ಸ್ಪರ್ಶ” ಕುಷ್ಠರೋಗ ಜಾಗೃತಿ ಅಭಿಯಾನ ಮುಕ್ತಾಯ ಆಚರಣೆಯಲ್ಲಿ ಅವರು ಮಾತನಾಡಿದ್ದರು.
ಕುಷ್ಠರೋಗವು ಒಂದು ಸಾಂಕ್ರಮಿಕ ರೋಗವಾಗಿದ್ದು ಇದು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಬAಧಪಟ್ಟಿದ್ದು ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ಯಾವುದೆ ತರಹದ ಮಚ್ಚೆಗಳು ಇದ್ದಲ್ಲಿ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗ ಕಂಡು ಬಂದಲ್ಲಿ ಇದನ್ನು ಬಹುಔಷಧ ಚಿಕಿತ್ಸೆಯಿಂದ ಗುಣ ಪಡಿಸಬಹುದು. ಕುಷ್ಠರೋಗಿಗಳನ್ನು ತನ್ನ ಮನೆಯ ಮಕ್ಕಳಂತೆ ನೋಡಿಕೊಂಡು ಉಪಚರಿಸುತ್ತಿರುವ ಹಿಂಡಲಗಾ ಕುಷ್ಠರೋಗ ಆಸ್ಪತ್ರೆ ಕೆಲಸವು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕರು ಹರ್ಷ ಗುಡಿಸಲಮನಿ ಇವರು ಪ್ರಸ್ತಾವಿಕವಾಗಿ ಕುಷ್ಠರೋಗಿಗಳ ಬಗ್ಗೆ ಭೇದಭಾವವಿಲ್ಲದೆ ಯಾರಿಗಾದರು ಬರಬಹುದು ರೋಗವನ್ನು ಪ್ರಾರಂಭದ ಲಕ್ಷಣಗಳಿದ್ದಾಗ ಕಂಡು ಹಿಡಿದ್ದು ಚಿಕಿತ್ಸೆಗೊಳಪಡಿಸಿದರೆ ಅಂಗವಿಕಲತೆ ಆಗುವುದಿಲ್ಲ, ಅಂಗವಿಕಲ ಕುಷ್ಠರೋಗಿಗಳನ್ನು ಆರ್.ಸಿ.ಎಸ್ ಶಸ್ತçಚಿಕಿತ್ಸೆಯಿಂದ ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ.ಡಿ.ಎಲ್.ಓ ಭರತ ಹೆಚ್ ಬಿ, ಡಾ|| ಸುರೇಸ ವರ್ಗಿಸ್, ಸ್ನೇಹಾ, ಪಾಟೀಲ ಶಿಕ್ಷಕರು, ಹಿಂಡಲಗಾ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳ ಸಿಬ್ಬಂದಿಗಳು ಹಾಜರಾಗಿದ್ದರು.