Tuesday, December 24, 2024
Google search engine
Homeಸುದ್ದಿಕಣಬರ್ಗಿ ವಸತಿ ಯೋಜನೆ: ಶೀಘ್ರ ಆರಂಭ

ಕಣಬರ್ಗಿ ವಸತಿ ಯೋಜನೆ: ಶೀಘ್ರ ಆರಂಭ

ಬೆಳಗಾವಿ,ಫೆ.13 (ಸಮರ್ಥ ನಾಡು ಸುದ್ದಿ): ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಣಬರ್ಗಿ ಗ್ರಾಮದ ಸರ್ವೆ ನಂಬರಗಳಲ್ಲಿ ಒಟ್ಟು 159 ಎಕರೆ- 23 ಗುಂಟೆ-8 ಆಣೆ ಕ್ಷೇತ್ರದಲ್ಲಿ ಪ್ರಾಧಿಕಾರ ಹಾಗೂ ರೈತರ ಸಹಭಾಗಿತ್ವದಲ್ಲಿ ಶೇಕಡಾ 50;50 ಅನುಪಾತದಲ್ಲಿ ವಸತಿ ಯೋಜನೆಯನ್ನು ಅನುಷ್ಠಾನಗೊಳ್ಳಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಸದರಿ ಯೋಜನೆಯಲ್ಲಿ ಒಳಗೊಂಡ ಜಮೀನುಗಳ ಪೈಕಿ ಒಟ್ಟು 29ಎಕರೆ-16ಗುಂಟೆ-06ಆಣೆ ಕ್ಷೇತ್ರದ ಜಮೀನುಗಳಿಗೆ ರಿಟ್ ಅರ್ಜಿ ಸಂಖ್ಯೆ: 106336-106346/2014 ರನ್ವಯ ಮಾನ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಇದ್ದು, ಸದರಿ ಜಮೀನನ್ನು ಹೊರತು ಪಡಿಸಿ ಉಳಿದ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸರ್ಕಾರದಿಂದ ಅನುವೋದನೆ ಪಡೆದು ಟೆಂಡರ್ ಕರೆಯಲಾಗಿದೆ.
ಸದರಿ ಯೋಜನೆಯ ಪ್ರಾಥಮಿಕ ಕಾಮಗಾರಿಯನ್ನು 10 ದಿನಗಳಲ್ಲಿ ಪ್ರಾರಂಭಿಸಲು ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!