ಗದಗ (ಕರ್ನಾಟಕ ವಾರ್ತೆ) ಫೆಬ್ರುವರಿ 13: ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮ ಪಂಚಾಯತನಲ್ಲಿ ಮಂಗಳವಾರದಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಸ್ವಾಗತಿಸಿ, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು, ಸಾರ್ವಜನಿಕರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸಂವಿಧಾನ ಪೀಠಿಕೆಯನ್ನು ಜನಸಾಮಾನ್ಯರಿಗೆ ಅರ್ಥೈಸಬೇಕು. ಈ ಮೂಲಕ ಜನಸಾಮಾನ್ಯರು ಸಹ ಸಂವಿಧಾನವನ್ನು ಅರಿತು ತಮ್ಮ ಹಕ್ಕು ಕರ್ತವ್ಯಗಳನ್ನು ಪಾಲಿಸಬೇಕು. ಸಂವಿಧಾನ ದತ್ತವಾಗಿ ಇರುವ ಹಕ್ಕುಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಜನ ಸಾಮಾನ್ಯರೆಲ್ಲರೂ ಒಂದು ಎಂಬ ಭ್ರಾತೃತ್ವ ಭಾವನೆ ಮೂಡಿಸುವ ಆಶಯವನ್ನು ಸಂವಿಧಾನ ಜಾಗೃತಿ ಕಾರ್ಯಕ್ರಮ ಒಳಗೊಂಡಿದೆ.