Saturday, April 26, 2025
Google search engine
Homeರಾಜ್ಯಜಿಲ್ಲೆಯಲ್ಲಿ ಬೇರೆ ಯಾರಿಗಾದ್ರೂ ಅನ್ಯಾಯ ಆದಾಗ ಈ ಶಾಸಕರು ಬರಲ್ಲ : ಸತೀಶ ಜಾರಕಿಹೊಳಿ
spot_img

ಜಿಲ್ಲೆಯಲ್ಲಿ ಬೇರೆ ಯಾರಿಗಾದ್ರೂ ಅನ್ಯಾಯ ಆದಾಗ ಈ ಶಾಸಕರು ಬರಲ್ಲ : ಸತೀಶ ಜಾರಕಿಹೊಳಿ

ಬೆಳಗಾವಿ: ಜನಿವಾರ ವಿಚಾರವನ್ನು ಅನವಶ್ಯಕವಾಗಿ ಬಿಜೆಪಿಯವರು ದೊಡ್ಡದು ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಶಾಸಕರು ತಾವೇ ನೇತೃತ್ವ ವಹಿಸಿ ಪ್ರತಿಭಟನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಬೇರೆ ಯಾರಿಗಾದ್ರೂ ಅನ್ಯಾಯ ಆದಾಗ ಈ ಶಾಸಕರು ಬರಲ್ಲ. ಈ ರೀತಿ ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಎನ್ನುವ ಮೂಲಕ ಬಿಜೆಪಿ ಶಾಸಕ ಅಭಯ್ ಪಾಟೀಲಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟರು.

ಬಿಜೆಪಿ ಸರ್ಕಾರದಲ್ಲಿ ಹಿಜಾಬ್ ವಿವಾದ ನಡೆದಿತ್ತು. ಈಗ ಜನಿವಾರ ವಿವಾದ ನಡೆದಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿದ ಅವರು, ಅದು ಬೇರೆ, ಈ ವಿಷಯ ಬೇರೆ. ಅದು ಆಕಸ್ಮಿಕವಾಗಿ ನಡೆದಿತ್ತು. ಎರಡನ್ನೂ ಹೋಲಿಕೆ ಮಾಡಲು ಆಗಲ್ಲ. ಇನ್ನು ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ. ಈಗ ಅವರಿಗೆ ಬೇರೆ ಏನು ಕೆಲಸ ಇದೆ. ಅದೇ ರೀತಿ ಇಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ಪ್ರತಿಭಟನೆಗೆ ಎಲ್ಲರನ್ನೂ ಕರೆದುಕೊಂಡು ಬಂದಿದ್ದರು‌. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗಬೇಕು. ಆದರೆ, ಸರ್ಕಾರಕ್ಕೂ ಅದಕ್ಕೂ ಏನು ಸಂಬಂಧ ಎಂದು ಕಿಡಿಕಾರಿದರು.

ಮೊದಲ ವರ್ಷದಿಂದ ಹೊಸ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಆಗಬೇಕು ಎಂದು ಪ್ರಯತ್ನಿಸುತ್ತಿದ್ದೇವೆ. ಮೂರು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಈಗ ಮೊದಲ ಹಂತದ ಕಾಮಗಾರಿ ಆರಂಭವಾಗಲಿದೆ. ಈಗಿರುವ ಕಚೇರಿಗಳನ್ನು ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ. ಅದು ಮುಗಿಯಲು 2-3 ವರ್ಷ ಬೇಕು. ಇನ್ನು ಮೇಲ್ಸೇತುವೆಗೂ ಕನಿಷ್ಠ 2 ವರ್ಷ ಬೇಕು. ಮಳೆಗಾಲದ ಬಳಿಕ ಕೆಲಸ ಪ್ರಾರಂಭವಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗಳು ಒಂದೊಂದಾಗಿ ಮುಗಿಯುತ್ತಿವೆ ಎಂದು ವಿವರಿಸಿದರು.

ನಗರ ಕೇಂದ್ರ ಬಸ್ ನಿಲ್ದಾಣ ಒಂದು ತಿಂಗಳಲ್ಲಿ ಪೂರ್ಣವಾಗಲಿದೆ. ಜೂನ್ 1ರಂದು ಉದ್ಘಾಟನೆ ಆಗಲಿದೆ. ಇನ್ನುಳಿದ ಕಾಮಗಾರಿಗಳು ಲೋಕಾರ್ಪಣೆಗೆ ಸಿದ್ಧವಾಗಿದ್ದು, ಅವುಗಳನ್ನು ಒಂದೊಂದಾಗಿ ಉದ್ಘಾಟಿಸಲಾಗುವುದು ಎಂದರು.

ಅನಧಿಕೃತ ಮನೆಗಳ ಕುರಿತು ನಿನ್ನೆ ಮುಖ್ಯಮಂತ್ರಿಗಳೇ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಮನೆ ಕಟ್ಟಿಸಿದ್ದರೆ ಸಾಕು ಅವರಿಗೆ ಮಹಾನಗರ ಪಾಲಿಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ರಿಂಗ್ ರೋಡ್ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ವಿಳಂಬವಾಗಿದೆ, ಆದರೆ, ಮಾಡಿಯೇ ಮಾಡುತ್ತಾರೆ. ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕೂಡ ಮಳೆಗಾಲ ನಂತರ ಆರಂಭವಾಗಲಿದೆ. ಇದರಲ್ಲಿ 57 ಎಕರೆ ಜಾಗದ ಸಮಸ್ಯೆ ಇದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲಿದ್ದಾರೆ‌. ಇದು ಬಿಟ್ಟರೆ ಇನ್ನುಳಿದಂತೆ ಎಲ್ಲವೂ ಸರಿ ಇದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಬೆಂಗಳೂರು ಮಾದರಿಯಲ್ಲಿ ಬೆಳಗಾವಿಯಲ್ಲಿ ಅಭಿವೃದ್ಧಿ‌ ವಿಚಾರಕ್ಕೆ ಅದಕ್ಕೆ ಬಹಳಷ್ಟು ಸಮಯ ಬೇಕಾಗುತ್ತದೆ. ಬೆಂಗಳೂರಿಗೆ 300 ವರ್ಷಗಳ ಇತಿಹಾಸವಿದೆ. ಆಗಿನಿಂದ ಅದು ಬೆಳೆಯುತ್ತಿದೆ. ಬೆಳಗಾವಿ ಅಭಿವೃದ್ಧಿ 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಶುರುವಾಗಿದೆ. ಇನ್ನು ಕನಿಷ್ಠ 10 ವರ್ಷ ಬೇಕಾಗುತ್ತದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಹೋದ ವರ್ಷ ಸಾಕಷ್ಟು ಮಳೆಯಾಗಿದೆ. ಬಹುತೇಕ ರಸ್ತೆಗಳ ದುರಸ್ಥಿ ಕಾರ್ಯ ನಡೆಯುತ್ತಿದೆ. ನಮಗೆ ಲಭ್ಯವಾದ ಅನುದಾನದಲ್ಲಿ ಕೆಲವು ಕಡೆ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಹುಲ್ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ವಿಚಾರಕ್ಕೆ ಅದರ ಬಗ್ಗೆ ಇನ್ನೂ ಚರ್ಚೆ ನಡೆದಿದೆ. ಎಲ್ಲ ಸೊಸೈಟಿಗಳ ಜೊತೆಗೆ ಸಭೆ ಮಾಡಿ ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗಾಗಲೇ ಯೂತ್ ಕಾಂಗ್ರೆಸ್ ಚುನಾವಣೆಯಿಂದ ರಾಹುಲ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!