ಹುಕ್ಕೇರಿ: ಹುಕ್ಕೇರಿ ತಹಸಿಲ್ದಾರ ಕಛೇರಿಗೆ ಬೆಳಗಾವಿ ಲೋಕಾಯುಕ್ತ ತಂಡ ಅನಿರೀಕ್ಷಿತ ಭೇಟಿ ನೀಡಿ ಕಡತಗಳನ್ನು ಪರಶೀಲನೆ ಮಾಡಿದ್ದಾರೆ.
ಸೋಮವಾರ ಮದ್ಯಾಹ್ನ ಲೋಕಾಯುಕ್ತ ಡಿ ಎಸ್ ಪಿ ಭರತ ಎಸ್ ಆರ್ ಮತ್ತು ಪುಷ್ಪಲತಾ ಎಸ್ ಹಾಗೂ ಇನ್ಸಪೇಕ್ಟರ ವೆಂಕಟೇಶ ಯಡಹಳ್ಳಿ ಮತ್ತು ಎಸ್ ಎಚ್ ಹೋಸಮನಿ ನೇತೃತ್ವದ ತಂಡ ಹುಕ್ಕೇರಿ ತಹಸಿಲ್ದಾರ ಕಛೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕಡತಗಳನ್ನು ಪರಶೀಲನೆ ಮಾಡಿ. ಲೋಕಾಯುಕ್ತ ಡಿ ಎಸ್ ಪಿ ಪುಷ್ಪ ಲತಾ ತಹಸಿಲ್ದಾರ ಮಂಜುಳಾ ನಾಯಿಕ ಇವರಿಂದ ಹಲವಾರು ಪ್ರಕರಣಗಳ ಮಾಹಿತಿ ಪಡೆದುಕೊಂಡರು.
ಮಾನ್ಯ ಕರ್ನಾಟಕ ಲೋಕಾಯುಕ್ತ ನ್ಯಾಯಾಧೀಶ ಬಿ ಎಸ್ ಪಾಟೀಲ ಆದೇಶದ ಮೇರೆಗೆ ಇಂದು ಅನರಿಕ್ಷೀತ ವಾಗಿ ಹುಕ್ಕೇರಿ ತಹಸಿಲ್ದಾರ ಕಛೇರಿಗೆ ಭೇಟಿ ನಿಡಲಾಗಿದೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಅಧಿಕಾರಿಗಳು ಕಛೇರಿ ಪ್ರತಿ ವಿಭಾಗದ ಕಾರ್ಯ ವೈಕರ್ಯ ಮತ್ತು ವಿವಿಧ ಪ್ರಮಾಣ ಪತ್ರ ವಿತರಣೆ ಹಾಗೂ ಭೂ ನ್ಯಾಯ ಕುರಿತು ಮಾಹಿತಿ ಸಂಗ್ರಹಿಸಿದರು.