ಬೆಳಗಾವಿ: ದರ ಕುಸಿತದಿಂದ ಹೊಲದಲ್ಲಿ ಕೊಳೆತು ಹೋಗುತ್ತಿರು ಕ್ಯಾಬಿಜ್ ದರ ನಿಗದಿಮಾಡಿ ಹಾನಿ ಆದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಜಿಲ್ಲಾ ಆಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು .

ಕ್ಯಾಬೀಜ, ಹಾಗೂ ಮುಂತಾದ ತರಕಾರಿಗಳು ದರ ಕುಸಿತದಿಂದ ಸಾವಿರಾರು ಎಕರೆಯಲ್ಲಿ ಬೆಳೆದ ಬೆಲೆ ಹೂಲದಲದಲಿಯೆ ಕೋಳೆತು ಹೋಗಿದೆ. ಇದರಿಂದ ರೈತರು ಬಹಳ ಸಂಕಷ್ಟದಲ್ಲಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿಂದ ತರಕಾರಿ ಬೆಳೆ ಕುಸಿತ ಆಗಿದ್ದು ತರಕಾರಿ ಮಾರುಕಟ್ಟೆ ಒಂದು ಲಾಟ್ರಿ ವ್ಯವಸ್ಥೆ ಆಗಿದೆ. ಯಾವಾಗ ದರ ನಿಗದಿ ಆಗುತ್ತದೆ. ಯಾವಾಗ ಕಡಿಮೆ ಆಗುತ್ತೆ ಎಂಬುವುದು ಗೊತ್ತೆ ಆಗುವುದಿಲ್ಲ .ಆದರೆ ಹೆಚ್ಚಾಗಿ ದರ ಕುಸಿತ ಆಗುತ್ತದೆ. ಈ ವೇಳೆ ಅಲ್ಲಿ ಕ್ಯಾಬಿಜ ಮತ್ತು ಪುಲಾವರ, ಮೂಲಂಗಿ ಇನ್ನಿತರ ಬೆಳೆ ಹೊಲದಲ್ಲಿ ಕೊಳೆತು ಹೋಗುತ್ತಿದೆ ಎಂದು ಅಪ್ಪಾಸಾಬ ದೇಸಾಯಿ ಹೇಳಿದರು.
ಒಂದು ಕ್ಯಾಬಿಜ ಸಸಿಯ ಬೆಲೆ 60 ಪೈಸೆ ಆದರೆ ಒಂದು ಕ್ಯಾಬಿಜನ ಬೆಲೆ 50 ಪೈಸೆ ಆಗಿದೆ ಹಾಗಾಗಿ ರೈತರು ತುಂಬ ಸಂಕಷ್ಟಇದ್ದಾರೆ. ಸಾಮಾನ್ಯ ರೈತರು ಬದಕಾಲಾರದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದು ನೀನೆ ಮೊನೆಯ ಸಮಸ್ಯೆ ಅಲ್ಲ ಕಳೆದ 20 ವರ್ಷಗಳಿಂದ ಈ ಸಮಸ್ಯೆ ಬಗ್ಗೆ ಸರ್ಕಾರಕೆ ಮನವಿ ಸಲ್ಲಿಸುತ್ತಾ ಬಂದಿದೆವೆ
ಆದ್ರೆ ಯಾವ ಸರ್ಕಾರವೂ ಇದರ ಬಗ್ಗೆ ಗಮನ ಹರಿಸೋತಿಲ್ಲ ಸರ್ಕಾರ ಕೋಡಲೆ ಇದರ ಬಗ್ಗೆ ಗಮನಹರಿಸಿ ಸದ್ಯ ಆದ ಬೆಳೆ ಹಾನಿಗೆ ಸೂಕ್ತ ಪರಿಹಾರ ಹಾಗೂ ದ್ದರ ನಿಗದಿಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸುಭಾಸ ಧಾಯಗೋಂಡೆ, ಮಾರುತಿ ಕಡೆಮನಿ,ರಾಮನಗೌಡ ಪಾಟೀಲ, ಚಂದ್ರು ರಾಜಾಯಿ,ರಾಜು ಕಾಗಣೇಕರ, ನಾಮದೇವ ದುಡುಮ, ಸೇರಿದಂತೆ ಇತರರು ಇದರು.