ಬೆಳಗಾವಿ:ಯತ್ನಾಳ ಅವರು ಈಗಲೂ ಕೂಡಾ ನಮ್ಮ ತಂಡದಲ್ಲಿ ಇದ್ದಾರೆ. ಅವರು ತಾಂತ್ರಿಕವಾಗಿ ಉಚ್ಚಾಟನೆ ಆಗಿದರೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು ಯತ್ನಾಳ ಅವರು ಮಾತಿನ ಬರದಲ್ಲಿ ಏನೇನೂ ಮಾತನಾಡುತ್ತಾರೆ ಅವರಿಗೆ ಯಾರಿಗೂ ಕೆಟ್ಟದು ಬಯಸುವ ಉದೇಶ ಅವರಿಗೆ ಇರುವುದಿಲ್ಲ .ಯತ್ನಾಳ ಕುರಿತು ರಾಜ್ಯದ ಜನರಿಗೆ ಮಾಹಿತಿ ಸಿಗಲಿ ಅಂತಾ ಮಾತನಾಡತ್ತಾ ಇರುವೆ ಎಂದರು.
ಯತ್ನಾಳವರೇ ಪದೇ ಪದೇ ಮನವಿ ಮಾಡುತ್ತಿರುವೆ ಯಾರಿಗೂ ಬೈಬೇಡಾ , ಮತ್ತು ಪಕ್ಷಕ್ಕೆ ಮುಜುಗುರ ಆಗದಂತೆ ಮಾಡಬೇಡಾ ಎಂದು ಯತ್ನಾಳಗೆ ಹೇಳಿರುವೆ . ಇದಕೆ ಯತ್ನಾಳ ಅವರದು ಸ್ಪಂದನೆ ಮಾಡುದು ವಿಶ್ವಾಸ ನನಗೆ ಇದೆ. ಆದರೆ ಯತ್ನಾಳ ಅವರದು ಹುಟ್ಟು ಗುಣ ಕೆಲವೊಂದು ಸಲ ಮಾತನಾಡುತ್ತಾರೆ.
ಅವರು ಮಾತನಾಡುವುದೇ ಬೇರೆ ಒಂದೊಂದು ಟ್ವಿಸ್ಟ್ ಆಗಿ ಬಿಡುತ್ತೆ. ನಿನ್ನೆ ಯತ್ನಾಳ ಅವರು ಹುಬ್ಬಳ್ಳಿಯಲ್ಲಿ ಪ್ರೆಸ್ಮೀಟ್ ಮಾಡಿದ್ದಾರೆ. ಕೇಂದ್ರದ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ಬಗ್ಗೆ ತಿಳಸಬೇಕಿತ್ತು. ನೋಡಪ್ಪಾ ನಾವು ರಾಷ್ಟ್ರೀಯ ಪಕ್ಷ ಎಂದು ಅಮಿತ ಷಾ ಅವರು ಯಡಿಯೂರಪ್ಪ ಅವರಿಗೆ ತಿಳಿಸಿದರು. ಮಾತಿನ ಬರದಲ್ಲಿ ಯತ್ನಾಳ ನಿನ್ನೆ ಮಾತನಾಡಿದ್ದಾರೆ ಎಂದರು.
ರಾಷ್ಟ್ರೀಯ ಸಮಸ್ಯೆ ಇದೆ ಅದನ್ನ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಮಾಡೋಣ ಎಂದು ಯಡಿಯೂರಪ್ಪ ಸಂದೇಶ ನೀಡಿದ್ದಾರೆ. ನಿನ್ನೆ ಹುಬ್ಬಳಿಯಲ್ಲಿ ಯತ್ನಾಳ ಮಾತನಾಡಿದ್ದು ತಪ್ಪು ಅವರು ಹೇಳಿದ ಅರ್ಥ ಬೇರೆ ಇದೆ ತಪ್ಪು ಕಲ್ಪನೆ ಮಾಡಿಕೊಳ್ಳಬೇಡಿ ಎಂದರು.
ಬೇರೆ ಪಕ್ಷ ಕಟ್ಟುತ್ತಾರೆ ಯತ್ನಾಳ ಎನ್ನುವ ವಿಚಾರ ಸಾಕಷ್ಟು ಚರ್ಚೆ ಹಾಗೂ ಬಿಜೆಪಿ ನಾಯಕರ ಬಗ್ಗೆ ಮಾತನಾಡುತ್ತಿರುವ ವಿಚಾರಗಿ ಬೇರೆ ಪಕ್ಷ ಎನ್ನು ಕಟ್ಟುವುದಿಲ್ಲ ಬಿಜೆಪಿ ನಾಯಕರನ್ನ ಬೈಯುತ್ತಿಲ್ಲಾ ಅವರು ಒಂದೇ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ತಂದೆ ಮತ್ತು ಪೂಜ್ಯ ಮಗನ ಬಗ್ಗೆ ಮಾತನಾಡಬೇಡಾ ಸಂಘಟನೆ ಮಾಡು ಹೊರತಾಗಿ ಬೇರೆ ಯಾವ ವಿಷಯ ಮಾತನಾಡಬೇಡ ಎಂದು ಮನವಿ ಮಾಡಿದ್ದೇನೆ ಎಂದರು.
ಯತ್ನಾಳ ಅವರಿಗೆ ಸಿದ್ದೇಶ, ಹಾಗೂ ನಾನು,ಕುಮಾರ ಬಂಗಾರಪ್ಪಾ ಸೇರಿ ಹಲವರು ಮಾತನಾಡಿದ್ದೇವೆ.ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪಕ್ಷ ಇದೆ ಬಡವರ ಪಕ್ಷ ಇದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಪಕ್ಷ ಈ ಇಲ್ಲೆ ನಮಗೆ ನ್ಯಾಯ ಸಿಗುತ್ತೆ. ರಾಷ್ಟ್ರೀಯ ನಾಯಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ನಮಗೆ ಕೊಡುತ್ತಾರೆ ಅಂತಾ ನಂಬಿಕೆ ಇದೆ. ಯತ್ನಾಳ ಅವರನ್ನ ನಮ್ಮ ಪಕ್ಷದಿಂದ ಬಿಟ್ಟು ಕೊಡುವುದಿಲ್ಲಾ ಅವರು ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲಾ ಇಲ್ಲೆ ಇದು ಮುಂದುವರೆಯುತ್ತಾರೆ ಎಂದರು.
ಇನ್ನೊಂದು ಬಾರಿ ನಾವು ಅವರ ಜೊತೆ ಮಾತನಾಡುತ್ತೇವೆ. ಯತ್ನಾಳ ಅವರ ಬಾಯಿ ಮುಚ್ಚಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಪಕ್ಷಕ್ಕೆ ಒಳ್ಳೆದಾಗುತ್ತೆ. ಮರಳಿ ಪಕ್ಷಕ್ಕೆ ಕರೆಸುವಕ ಕೆಲಸ ಮಾಡುವೆ. ಆದರೆ ನಮ್ಮಗೆ ಯತ್ನಾಳ ಟೈಮ್ ಕೊಡತ್ತಾ ಇಲ್ಲಾ.
ನಿನ್ನೆ ನಾನು ಹುಬ್ಬಳ್ಳಿಗೆ ಹೋಗಬೇಕಿತ್ತು ಗೋಕಾಕನಲ್ಲಿ ಕಾರ್ಯಕ್ರಮ ಇರುವ ಕಾರಣ ಹೋಗಲಿಕೆ ಆಗಲಿಲ್ಲಾ. ಯತ್ನಾಳ ಅವರನ್ನ ಅವೈಡ್ ಮಾಡತ್ತಾ ಇಲ್ಲಾ ನಾವು ಈಗಾಗಲೇ ಯತ್ನಾಳ ಅವರನ್ನ ಪಕ್ಷಕ್ಕೆ ಕರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು.