ಬೆಳಗಾವಿ: ಗಾಂಜಾ ನಶೆಯಲ್ಲಿ ಕಿಡಿಗೇಡಿಗಳು ಚಲಿಸುತ್ತಿದ್ದ ಆಟೋಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ಬೆಳಗಾವಿಯ ಅಯೋಧ್ಯ ನಗರದಲ್ಲಿ ನಡೆದಿದೆ .
ಹಲಗಾ ಬಸ್ತವಾಡ ಗ್ರಾಮದ ಪ್ರಶಾಂತ ಬೊಮ್ಮನ್ನವರ(25) ಎಂಬುವವರಿಗೆ ಸೇರಿದ ಆಟೋಗೆ ರಾಹುಲ್ ಎಂಬಾತ ಪೆಟ್ರೋಲ್ ಎರಚಿ ಸುಟ್ಟಿರುವ ಆರೋಪ.
ಆಟೋಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ವಾಹನ ನಿಲ್ಲಿಸಿ ಪ್ರಾಣ ಉಳಿಸಿಕೊಂಡ ಆಟೋ ಚಾಲಕ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಸ್ಥಳಕ್ಕೆ ಮಾರ್ಕೆಟ್ ಸಿಪಿಐ ವಿಜಯ ಧಾಮಣ್ಣವರ, ಪಿಎಸ್ಐ ವಿಠ್ಠಲ ಹಾವನ್ನರ ಭೇಟಿ, ಪರಿಶೀಲನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.