ಬೆಳಗಾವಿ:ಮಹಿಳೆಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಾಲೂಕಿನ ಮಚ್ಛೆ ಗ್ರಾಮದ ವಿಜಯ ಗಲ್ಲಿಯಲ್ಲಿ ನಡೆದಿದೆ.
ಮಚ್ಛೆ ಗ್ರಾಮದ ಅನಿತಾ ನಿಲೇಶ ನಂದ್ಯಾಳ್ಕರ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ನಿಲೇಶನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ, ಯುವತಿ ಅಂತರ್ಜಾತಿ ವಿವಾಹವಾದ ಹಿನ್ನೆಲೆ ಕುಟುಂಬಸ್ಥರ ನಿರಂತರ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮದುವೆಯಾದ ಯುವಕನೇ ಆಕೆಯನ್ನ ಹೊಡೆದುಕೊಂದು ನೇಣು ಹಾಕಿದ್ದಾನೆಂದು ಕುಟುಂಬಸ್ಥರ ಆರೋಪಿಸಿದರು.
ಸ್ಥಳಕ್ಕೆ ಗ್ರಾಮೀಣ ಎಸಿಪಿ ಶೇಖರಪ್ಪ ಸೇರಿದಂತೆ ಪೊಲೀಸರು ಭೇಟಿ,ಪರಿಶೀಲಿಸಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.