ಬೆಳಗಾವಿ::ಸೈಬರ್ ಕಳ್ಳರು ಬೆದರಿಕೆ ಹೆದರಿ ವೃದ್ಧ ದಂಪತಿಯೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ನಿವೃತ್ತ ರೇಲ್ವೆ ಉದ್ಯೋಗಿ ಡಿಯೋಗೋ ನಜರತ್ (83), ಪಾವಿಯಾ ನಜರತ್ (79) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿಗಳು.ಬೀಡಿ ಗ್ರಾಮದಲ್ಲಿರುವ ವೃದ್ಧ ದಂಪತಿಗೆ ಸೈಬರ್ ಕಳ್ಳರು ಕಾಲ್ ಮಾಡಿ ನಿಮ್ಮ ನಗ್ನ ವಿಡಿಯೋಗಳು ನಮ್ಮ ಬಳಿ ಇವೆ ಎಂದು ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಈ ಬೆದರಿಕೆಗೆ ಹೆದರಿ ವೃದ್ಧ ದಂಪತಿ ಸೈಬರ್ ಕಳ್ಳರಿಗೆ 6.ಲಕ್ಷ ಹಣ ನೀಡಿದ್ದರು. ನಂತರ ಇದೇ ಚಾಳಿ ಮುಂದುವರೆಸಿದ ಸೈಬರ್ ಕಳ್ಳರು ಮತ್ತಷ್ಟು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಮೊದಲೇ ಹಣ ಕಳೆದುಕೊಂಡ ವೃದ್ಧ ದಂಪತಿ ಈ ಸೈಬರ್ ಕಳ್ಳರ ಕಾಟ ತಡೆಯಲಾರೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.