Tuesday, April 29, 2025
Google search engine
Homeಜಿಲ್ಲಾಮಾರೀಹಾಳ ಪೋಲಿಸ್ ಠಾಣೆಯಲ್ಲಿ‌ ಜನಸಂಪರ್ಕ ಸಭೆ; ಸಾರಿಗೆ ಸುರಕ್ಷಿತೆ, ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಪೋಲಿಸ್ ಆಯುಕ್ತ...
spot_img

ಮಾರೀಹಾಳ ಪೋಲಿಸ್ ಠಾಣೆಯಲ್ಲಿ‌ ಜನಸಂಪರ್ಕ ಸಭೆ; ಸಾರಿಗೆ ಸುರಕ್ಷಿತೆ, ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೂಚನೆ..!

ಬೆಳಗಾವಿ: ಬೆಳಗಾವಿ ಮತ್ತು ಬಾಗಲಕೋಟ ರಸ್ತೆಯು ಬಹಳ ಜನದಟ್ಟಣೆಯಾಗಿದ್ದು, ಸರಣಿ ಅಪಘಾತಗಳು ಮತ್ತು ಬಾರಿ ಪ್ರಮಾಣದಲ್ಲಿ ಅಪಘಾತಗಳ‌ ಸಂಖ್ಯೆಗಳು ಹೆಚ್ಚಾಗಿವೆ ಸರಿಯಾದ ರೀತಿಯಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕೆಂದು ಬೆಳಗಾವಿ ನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಹೇಳಿದರು.

ಬೆಳಗಾವಿ ಗ್ರಾಮೀಣ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಮಾರೀಹಾಳ ಪೋಲಿಸ್ ಠಾಣೆಯ ವತಿಯಿಂದ‌ ಇಂದು ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಕಮಿಷನರ್ ಅವರ ಮುಂದೆ ವ್ಯಕ್ತ ಪಡಿಸಿದರು.

ಮಾರೀಹಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕ್ರೈಂ, ದರೋಡೆ, ಪೊಲಿ-ಪುಂಡರ ಹಾವಳಿ ಪ್ರಕರಣಗಳು ಹೆಚ್ಚಾಗದಂತೆ ಸರಿಯಾದ ರೀತಿಯಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ರಾತ್ರಿ-ಹಗಲು ಬಿಟ್ ಮಾಡುವುದು ಹೆಚ್ಚಾಗಬೇಕು ಸಂಶಯಾಸ್ಪದ ರೀತಿ ಕಂಡುಬಂದರೆ ಹಂತವರನ್ನು ತಕ್ಷಣವೇ ವಶಕ್ಕೆ ಪಡೆದುಕೊಂಡರು ಪರಿಶೀಲನೆ ನಡೆಸಬೇಕು.

ಇನ್ನೂ ಸಾರ್ವಜನಿಕರ ಸಲಹೆಗಳ ಮೇರೆಗೆ ಆಯಾ ಪ್ರದೇಶದ ಮುಖಂಡರುಗಳು‌ ಮಾತನಾಡಿ‌ ತಮ್ಮ ಪ್ರದೇಶದಲ್ಲಿ ಪ್ರತಿ ತಿಂಗಳು ಅಧಿಕಾರಿಗಳು ಮತ್ತು ಬಿಟ್ ಸಿಬ್ಬಂದಿ ಉಪಪಸ್ಥಿತಿಯಲ್ಲಿ ಸಭೆಯನ್ನು ಮಾಡಬೇಕು.

ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶದಲ್ಲಿ ಕುಡಿಯು ನೀರಿನ‌ ಪೂರೈಕೆಗೆ ಪೋಲಿಸ್ ಠಾಣೆಯಿಂದ ನೇರವು ಮಾಡಿಕೊಡಬೇಕು. ಸುತ್ತ ಮುತ್ತ ಅನೇಕ ಕರ್ಷಕ ಶಬ್ದಗಳ ಬೈಕಗಳಿವೆ ಅಂತಹ ಬೈಕ್ ಸವಾರರ ಮೇಲೆ‌ ಹೆಚ್ಚಿನ ನಿಗಾವಹಿಸಿ ಅವುಗಳ ಮೇಲೆ ಪ್ರಕರಣ ದಾಖಲು ಮಾಡಬೇಕು.

ಮಾರೀಹಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಅನೇಕ ರೀತಿ ಸಭೆ, ಸಮಾರಂಭ, ಜಾತ್ರಾ ಮಹೋತ್ಸವಗಳಲ್ಲಿ ನಡೆಯುತ್ತವೆ ಅವುಗಳಲ್ಲಿ ಹಗಲಿರುಳು ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಎಸಿಪಿ ಗಂಗಾಧರ್ ಬಿ ಎಮ್, ಮಾರೀಹಾಳ ಪೋಲಿಸ್ ಠಾಣೆ
ಸಿಪಿಐ ಮಂಜುನಾಥ ನಾಯಕ್, ಪಿಎಸ್ಐ ಮಂಜುನಾಥ ನಾಯಕ, ಪಿಎಸ್ಐ ಚಂದ್ರಶೇಖರ್ ಹಾಗೂ ಸುತ್ತಮತ್ತಲಿನ ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!