Tuesday, April 29, 2025
Google search engine
Homeಅಂಕಣ62ರ ಅಂಕಲ್ ಜೊತೆಗೆ 8ನೇ ಭಾರಿ ಮದುವೆಯಾದ ಮಹಿಳೆ : PF ಹಣ ದೋಚಿದ್ದಾಳೆ ಎಂದ...
spot_img

62ರ ಅಂಕಲ್ ಜೊತೆಗೆ 8ನೇ ಭಾರಿ ಮದುವೆಯಾದ ಮಹಿಳೆ : PF ಹಣ ದೋಚಿದ್ದಾಳೆ ಎಂದ ಅಂಕಲ್ !

ಬೆಂಗಳೂರು : ಮ್ಯಾಟ್ರಿಮೋನಿಯಲ್ಲಿ ಮೆಚ್ಚಿಕೊಂಡು ಮದುವೆಯಾಗಿದ್ದ ಅಂಕಲ್ ಒಬ್ಬನಿಗೆ ಮಹಿಳೆ ಶಾಕ್ ನೀಡುದ್ದು. ಮಹಿಳೆಯಿಂದ 25 ಲಕ್ಷ ಹಣವನ್ನು ಕಳೆದುಕೊಂಡ ಅಂಕಲ್ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇದರ ಕುರಿತಾದ ಒಂದು ವರದಿ ಕೆಳಗಿದೆ.

ಹೌದು… 62 ವರ್ಷದ ರಾಮಕೃಷ್ಣ ಎಂಬಾತ ಮ್ಯಾಟ್ಟಿಮೋನಿಯಲ್ಲಿ 50 ವರ್ಷದ ವಿಜಯಲಕ್ಷಿ ಎಂಬಾಕೆಯನ್ನು ನೋಡಿ ಮದುವೆಯಾಗಿದ್ದನು. ಈ ಮದುವೆಗೂ ಮುನ್ನ ರಾಮಕೃಷ್ಣರಿಗೆ ಮದುವೆಯಾಗಿತ್ತು. ಆದರೆ ಮೊದಲ ಪತ್ನಿ ತೀರಿಕೊಂಡ ಹಿನ್ನಲೆ ಎರಡನೇ ಮದುವೆ ಮಾಡಿಕೊಂಡಿದ್ದನು. ಮಹಿಳೆ ವಿಜಯಲಕ್ಷ್ಮಿ ಕೂಡ ಈ ಮದುವೆಗೂ ಮುನ್ನ 7 ಮದುವೆಯಾಗಿದ್ದಳು. ಇದು ಆಕೆಗೆ 8ನೇ ಮದುವೆಯಾಗಿತ್ತು.

ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದ ಇಬ್ಬರು 2020ರ ನವೆಂಬರ್ನಲ್ಲಿ ಮದುವೆಯಾಗಿದ್ದರು. ರಾಮಕೃಷ್ಣರ ಹಿನ್ನಲೆ, ಫಿಎಫ್ ಅಮೌಂಟ್, ಚಿನ್ನಭರಣದ ಬಗ್ಗೆ ತಿಳಿದು ಕೊಂಡಿದ್ದ ಮಹಿಳೆ ಮದುವೆಯಾದ ಕೆಲವೇ ತಿಂಗಳಲ್ಲಿ ಹಣ ಮತ್ತು ಚಿನ್ನಾಭರಣಕ್ಕಾಗಿ ಬೆದರಿಕೆ ಹಾಕಿದ್ದಳು. ಜೊತೆಗೆ ಮಹಿಳೆ ಇದಕ್ಕೂ ಮೊದಲು 7 ಮದುವೆಯಾಗಿದ್ದ ಬಗ್ಗೆ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು ಎಂದು ಅರೋಪಿಸಲಾಗಿದೆ.

ಹಾಗೇಯೆ ಮನೆಯಲ್ಲಿರುವ 25 ಲಕ್ಷ ಹಣವನ್ನು ಕಳವು ಮಾಡಿದ್ದಾರೆ ಎಂದು ರಾಮಕೃಷ್ಣ ದೂರು ನೀಡಿದ್ದು, ಜೊತೆಗೆ ಮಹಿಳೆ ಕೋರ್ಟ್ನಲ್ಲಿ ಸುಳ್ಳು ದೂರನ್ನು ನೀಡಿರೋ ಆರೋಪ ಮಾಡಿದ್ದಾರೆ. ನ್ಯಾಯಾಲಯದ ಫಿಸಿಆರ್ ಆಧರಿಸಿ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದು. ಮಹಿಳೆ ವಿಜಯ್ ಲಕ್ಷ್ಮಿ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -spot_img

Most Popular

error: Content is protected !!