ಬೆಳಗಾವಿ:ಬೆಳಗಾವಿಯ ಮಹಾಂತೇಶ ನಗರ ಬಳಿಯ ಕೆಎಂಎಫ್ ಡೈರಿಯ ಬಳಿ ಪ್ರಣೀತ ಕುಮಾರ್ (31) ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆದಿದೆ.
ಕೆಎಂಎಫ್ ಡೈರಿ ಬಳಿ ಟಿಳಕವಾಡಿಯ ದ್ವಾರಕಾ ನಗರ ಐದನೇ ಕ್ರಾಸ್‌ನ ನಿವಾಸಿ ಪ್ರಣೀತ ಕುಮಾರ್ ಎಂಬುವನ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ ತೊಡೆಯ ಭಾಗ ಮತ್ತು ಕಿವಿಯ ಭಾಗಕ್ಕೇ ಗಂಭೀರ ಗಾಯವಾಗಿದೆ. ದಾಳಿಯಲ್ಲಿ ದೇಹಕ್ಕೆ ತಗುಲಿದ ಗುಂಡನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದಾನೆ.
ವೈಯಕ್ತಿಕ ದ್ವೇಷ ಹಿನ್ನೆಲೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ