ಪಾಲಿಕೆಯ ಹೊಸ ಸಮಿತಿಯ ಮೊದಲ ಲೆಕ್ಕಪತ್ರ ಸ್ಥಾಯಿ ಸಮಿತಿ ಸಭೆ..
ಪಾಲಿಕೆಯ ಲಾಭ ನಷ್ಟದ ವಿವಿರ ತಿಳಿಸಿದ ಮುಖ್ಯ ಲೆಕ್ಕಾಧಿಕಾರಿ..
ಸಭೆಗೆ ಗೈರಾದವರ ಮೇಲೆ ಶಿಸ್ತು ಕ್ರಮ..
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಸ್ಥಾಯಿ ಸಮಿತಿಗಳು ರಚನೆಯಾದ ಮೇಲೆ, ಸೋಮವಾರ ದಿನಾಂಕ 22/07/2024 ರಂದು ಸಮಿತಿಯ ಅಧ್ಯಕ್ಷರಾದ ರೇಷ್ಮಾ ಕಾಮಕರ ಅವರ ನೇತೃತ್ವದಲ್ಲಿ ಪ್ರಥಮ ಲೆಕ್ಕಪತ್ರ ಸ್ಥಾಯಿ ಸಮಿತಿಯ ಸಭೆ ಜರುಗಿದೆ.
ಮೊದಲಿಗೆ ಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಗಿರೀಶ ದೊಂಗಡಿ ಮಾತನಾಡಿ ಸಭೆಗೆ ಗೈರಾದ ಸಿಬ್ಬಂದಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಆಗಬೇಕು, ಸಭೆಗೆ ಹಾಜರಾಗುವಂತೆ ಮೊದಲೇ ತಿಳಿಸಿದ್ದರೂ ಕೆಲ ಅಧಿಕಾರಿಗಳು ತಡವಾಗಿ ಬರುವದು, ಗೈರಾಗುವುದು ಮಾಡಿದ್ದಾರೆ, ಅಂತವರ ವಿರುದ್ಧ ಶಿಸ್ತು ಕ್ರಮ ಜಾರಿಯಾಗಬೇಕು ಎಂದರು..
ಅಧ್ಯಕ್ಷರ ಅನುಮತಿ ಮೇರೆಗೆ ಕೆಲ ವಿಷಯಗಳ ಚರ್ಚೆ ನಡೆದಿದ್ದು, ಪಾಲಿಕೆಯಿಂದ ತೆರಿಗೆ ಇಲಾಖೆಗೆ ನೀಡಲು ಬಾಕಿಯಿರುವ ಜಿಎಸ್ಟಿ ಬಗ್ಗೆ ವಿಚಾರಣೆ ಮಾಡಿದಾಗ ಪಾಲಿಕೆಯ ಲೆಕ್ಕಾಧಿಕಾರಿ ಸ್ಪಷ್ಟೀಕರಣ ನೀಡಿದ್ದು, ಮುಂದಿನ ಸಭೆಯಲ್ಲಿ ಕಡತದೊಂದಿಗೆ ಸಮಗ್ರ ಮಾಹಿತಿ ಒದಗಿಸಲಾಗುತ್ತದೆ ಎಂದರು..
ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಈರಣ್ಣ ಚಂದರಗಿ ಅವರು ಮಾತನಾಡಿ, 1-7-2017 ರಿಂದ ಇಲ್ಲಿಯವರೆಗೆ ಪಾಲಿಕೆಯಿಂದ ಜಿಎಸ್ ಟಿ ಕಟ್ಟಿಲ್ಲ ಸುಮಾರು ಮೂರುವರೆ ಕೋಟಿಯಷ್ಟು ಆಗಬದುದು ಜೊತೆಗೆ ಅದರ ಬಡ್ಡಿಯನ್ನು ಕೂಡಾ ಪಾವತಿಸಬೇಕಾಗುತ್ತದೆ, ಪಾಲಿಕೆಗೆ ಯಾವಾವ ಮೂಲದಿಂದ ಆದಾಯ ಬರುತ್ತದೆ, ಅದರಲ್ಲಿ ಜಿಎಸ್ ಟಿ ಯಾವುದಕ್ಕೆ ಮತ್ತು ಎಷ್ಟು ಪಾವತಿಸಬೇಕೆಂದು ಸಮಗ್ರ ಮಾಹಿತಿ ಕಲೆಹಾಕಿ ವಿವಿರ ನೀಡುತ್ತೇವೆ ಎಂದರು..
ಪಾಲಿಕೆಯಲ್ಲಿ ಎಷ್ಟು ಖಾತೆಗಳಿಗೆ, ಎಷ್ಟು ಆದಾಯ ಬರುತ್ತದೆ, ಎಂದು ಎಲ್ಲಾ ಸದಸ್ಯರಿಗೂ ತಿಳಿಯಬೇಕು ಅದರ ಮಾಹಿತಿ ನೀಡಿ, ಹೆಚ್ಚು ಆದಾಯ ತಂದ ವಿಭಾಗಕ್ಕೆ ನಮ್ಮ ಕಡೆಯಿಂದ ಬಹುಮಾನ ಕೂಡಾ ನೀಡುತ್ತೇವೆ ಎಂದು ಆಡಳಿತ ಪಕ್ಷದ ನಾಯಕ ಗಿರೀಶ ದೊಂಗಡಿ ಹೇಳಿದಾಗ ಅದಕ್ಕೆ ಉತ್ತರಿಸಿದ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳು ನಮ್ಮ ಖಾತೆಯಲ್ಲಿ ಇರುವ ಅನುದಾನದ ಮಾಹಿತಿ ಇದ್ದು, ಆಡಳಿತ ವಿಭಾಗದ ಖಾತೆಯಲ್ಲಿ ಎಷ್ಟು ಅನುದಾನ ಇದೆ ಎಂಬ ಮಾಹಿತಿ ಇಲ್ಲ, ಪಾಲಿಕೆಯ ಖಾತೆಗಳನ್ನು ಆದಷ್ಟು ಕಡಿಮೆ ಮಾಡಿದರೆ ಹಾಗೂ ಪ್ರತಿ ವಿಭಾಗದ ಮಾಹಿತಿ ದೊರೆತರೆ ಸ್ಪಷ್ಟ ಚಿತ್ರಣ ದೊರೆಯುವುದು ಎಂದರು..
2021- 22ರ ವರೆಗೆ ಮಾತ್ರ ಪಾಲಿಕೆಯ ಆಡಿಟ್ ಆಗಿದ್ದು, ಪ್ರತಿ ವರ್ಷ ಆಡಿಟ್ ಆಗುವದು ತುಂಬಾ ಅವಶ್ಯಕ, ಇಲ್ಲವಾದರೆ ಮೇಲಾಧಿಕಾರಿಗಳಿಗೆ ಸರ್ಕಾರದ ಅನುದಾನವನ್ನು ನಿಲ್ಲಿಸುವ ಅವಕಾಶವಿದೆ ಎಂದರು..
ಲೆಕ್ಕಪತ್ರ ವಿಭಾಗಕ್ಕೆ ದಾಖಲೆಗಳನ್ನು ಸಂಗ್ರಹಿಸಿಡುವ ಕೊಠಡಿಯೇ ಪಾಲಿಕೆಯಲ್ಲಿ ಇಲ್ಲವಾಗಿದೆ, ತಾವೆಲ್ಲ ಮುಖ್ಯ ಲೆಕ್ಕಾಧಿಕಾರಿ ವಿಭಾಗಕ್ಕೆ ಒಂದು ಸಲ ಬಂದು, ನಮ್ಮ ಕೊಠಡಿ ನೋಡಿದರೆ ತಮಗೆ ತಿಳಿಯುವದು ಎಂದರು..
2010ರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಮೊಬೈಲ್ ಟವರ್ ಗಳಿಗೆ ಅನುಮತಿ ನೀಡಲಾಗಿದೆ? ಅವುಗಳಿಂದ ಎಷ್ಟು ಆದಾಯ ಸಂಗ್ರಹ ಆಗುತ್ತಿದೆ, ಮತ್ತು ಅವು ಯಾವ ಪರಿಸ್ಥಿತಿಯಲ್ಲಿವೆ, ಅದೇ ರೀತಿ ಮೇಘಾ ಗ್ಯಾಸ್ ಅವರು ಪಾಲಿಕೆಯ ಎಷ್ಟು ರಸ್ತೆ ಉಪಯೋಗಿಸಿಕೊಂಡಿದ್ದಾರೆ, ಇನ್ನು ಬೇರೆಬೇರೆ ಯೋಜನೆಗಳ ಸಂಸ್ಥೆಗಳು ಪಾಲಿಕೆಯ ರಸ್ತೆಯನ್ನು ಎಷ್ಟೆಷ್ಟು ಬಳಸಿಕೊಂಡಿದೆ ಎಂಬ ಮಾಹಿತಿಯನ್ನು ನಾವು ಪಡೆದುಕೊಂಡಾಗ ಇದರಿಂದ ಪಾಲಿಕೆಗೆ ಒಳ್ಳೆಯ ಆದಾಯ ಆಗಬಹುದು ಎಂದರು.
ಕೊನೆಗೆ ಸಮಿತಿಯ ಅಧ್ಯಕ್ಷರಾದ ರೇಷ್ಮಾ ಕಾಮಕರ ಅವರು ಮಾತನಾಡಿ, ಈ ಅವಧಿಯಲ್ಲಿ ನಮ್ಮ ಕಾರ್ಯವೈಖರಿಯನ್ನು ಹೊಸ ಬದಲಾವಣೆ ತಂದು, ಸಮಿತಿ ಸದಸ್ಯರು, ನಗರ ಸೇವಕರು ಹಾಗೂ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿ, ನಗರವನ್ನು ಅಭಿವೃದ್ದಿಯತ್ತ ಕೊಂಡೊಯ್ಯೋಣ ಎಂದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..