Monday, December 23, 2024
Google search engine
Homeಸಂಪಾದಕೀಯಕೆಡಿಪಿ ಸಭೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತರಾಟೆ..

ಕೆಡಿಪಿ ಸಭೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತರಾಟೆ..

ಕೆಡಿಪಿ ಸಭೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತರಾಟೆ..

ಶಾಲಾ ಶಿಕ್ಷಣ ಅಧಿಕಾರಿಗಳ ನಡೆಗೆ ಜನಪ್ರತಿನಿಧಿಗಳ ಬೇಸರ..

ಅಶಿಸ್ತು ತೋರುವ ಶಿಕ್ಷಕರ ಮೇಲೆ ಶಿಸ್ತು ಕ್ರಮ..

ಬೆಳಗಾವಿ:  ಸುವರ್ಣ ಸೌಧದಲ್ಲಿ ಕಳೆದ ವಾರ ಜರುಗಿದ 2024-25ನೇ ಸಾಲಿನ ಪ್ರಥಮ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ  ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಜನಪ್ರತಿನಿಧಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ -2 ಪ್ರಕಾಶ ಹುಕ್ಕೇರಿ ಅವರು ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಡೆಸ್ಕ್ ಖರೀದಿಗೆ ಟೆಂಡರ ಕರೆಯಲಾಗಿದ್ದರೂ ಸಹ ಇದುವರೆಗೆ ಡೆಸ್ಕ್ ಪೂರೈಕೆ ಆಗದಿರುವ‌‌ ಕುರಿತು ಸಭೆಯ‌ ಗಮನಕ್ಕೆ ತಂದು, ಟೆಂಡರ್ ಷರತ್ತುಗಳ ಅನುಸಾರ ಕಾಲಮಿತಿಯಲ್ಲಿ ಡೆಸ್ಕ್ ಪೂರೈಸಬೇಕಿತ್ತು ಯಾಕೆ ಆಗಿಲ್ಲ? ಪ್ರತಿ ಕ್ಷೇತ್ರಗಳಿಗೂ ಕೋಟಿಗಟ್ಟಲೇ ಅನುದಾನ ಬಂದಿದ್ದು, ಅದರ ಸಮರ್ಪಕ ಬಳಕೆ ಮಾಡದಿರುವ ನಿಮ್ಮಂತ ಅಧಿಕಾರಿಗಳು ಯಾಕೆ? ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಆಗಲೆಂದು ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ನೀವು ಯಾಕೆ ಸರಿಯಾದ ಕಾರ್ಯ ಮಾಡುತ್ತಿಲ್ಲ ಎಂದು  ಸಾರ್ವಜನಿಕ ಶಾಲಾ  ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಈ ಮಾತಿಗೆ ಧ್ವನಿಗೂಡಿಸಿದ ರಾಯಭಾಗ ಶಾಸಕರಾದ ದುರ್ಯೋಧನ ಐಹೊಳೆ ಅವರು ಈ ಯೋಜನೆ ಬಂದು ಎರಡು ವರ್ಷವಾದರೂ ಕ್ಷೇತ್ರದ ಶಾಸಕರಾದ ನಮಗೆ ಮಾಹಿತಿ ನೀಡಿಲ್ಲ, ಬೇರೆ ತಾಲೂಕುಗಳಿಗೆ ಟೆಂಡರ್ ಕರೆದು ನಮ್ಮ ತಾಲೂಕಿಗೆ ಯಾಕೆ ಕರೆದಿಲ್ಲ? ಇಂತಹ ಬೇಜವಾಬ್ದಾರಿ ನೀತಿ ಏಕೆ ಎಂದು ಪ್ರಶ್ನೆ ಮಾಡಿ, ಸ್ಥಳದಲ್ಲಿ ಬಿಇಒ ಅವರಿಗೆ ಕರೆ ಮಾಡಿ, ಮಾಹಿತಿ ಪಡೆದುಕೊಂಡರು..

ಇನ್ನು ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಭರಮಗೌಡ(ರಾಜು) ಕಾಗೆ ಅವರು ಮಾತನಾಡಿ,

ಕೆಲ‌ ಶಾಲಾ ಶಿಕ್ಷಕರು ದಿನನಿತ್ಯ ಶಾಲೆಗೆ ಮಧ್ಯಪಾನ ಮಾಡಿ ಬರುತ್ತಿರುವ ಕುರಿತು ದೂರುಗಳು ಬಂದಿದ್ದು ಇಂತಹ ಶಿಕ್ಷಕರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ‌ ಬೀರುತ್ತಿರುವುದರಿಂದ ಶಿಕ್ಷಕರ ನೇಮಕಾತಿ ಪ್ರಸ್ತಾವವನ್ನು ಸಲ್ಲಿಸುವುದರ‌ ಜತೆಗೆ ಶಿಕ್ಷಕರ‌ ನೇಮಕಾತಿಗೆ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದರು.

ತಕ್ಷಣ ಡೆಸ್ಕ್ ಖರೀದಿಗೆ ಸಚಿವರ ಸೂಚನೆ..

ಡೆಸ್ಕ್ ಖರೀದಿಗೆ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯಾದ್ಯಂತ ಅಗತ್ಯವಿರುವ ಶಾಲೆಗಳಿಗೆ ಡೆಸ್ಕ್ ಗಳನ್ನು ಒದಗಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿ ಅವರು, ಶೈಕ್ಷಣಿಕ ಪ್ರಗತಿಗಾಗಿ ಆದಷ್ಟು ಬೇಗ ಚಿಕ್ಕೋಡಿ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಪ್ರತ್ಯೇಕ ಶಾಲಾ ಶಿಕ್ಷಣ ಉಪನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ ಎಂದರು..

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಕೆಡಿಪಿ ಸಭೆಯನ್ನು ನಿರ್ವಹಿಸಿದ್ದು, ಈ ವಿಷಯದ ಕುರಿತಾಗಿ ಮಾತನಾಡುತ್ತಾ,

ಶಾಲೆಗಳಲ್ಲಿ ಆಶಿಸ್ತು ತೋರುವಂತಹ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವದು. ಅಲ್ಲದೇ ಪ್ರತಿ‌ ತಿಂಗಳ‌ ಮೂರನೇ ಶನಿವಾರದಂದು ಎಲ್ಲ ಶಾಲೆಗಳಲ್ಲಿ‌ ಪಾಲಕರ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..

 

RELATED ARTICLES
- Advertisment -spot_img

Most Popular

error: Content is protected !!