ಪಾಲಿಕೆಯಲ್ಲಿ ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿ ಸಭೆ.
ಗುತ್ತಿಗೆದಾರರ ಸಲುವಾಗಿ ಗುದ್ದಾಡಿದ ನಗರ ಸೇವಕರು ಮತ್ತು ಅಧಿಕಾರಿಗಳು..
ಬೆಳಗಾವಿ : ಮಹಾನಗರ ಪಾಲಿಕೆಯ ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿಯ ಸಭೆಯ ಅಧ್ಯಕ್ಷರಾದ ನೇತ್ರಾವತಿ ಭಾಗವತ ಅವರ ನೇತೃತ್ವದಲ್ಲಿ ಸೋಮವಾರ ದಿನಾಂಕ 22/07/2024ರಂದು ಮಧ್ಯಾಹ್ನ ನಡೆದಿದ್ದು ಹಲವು ಮಹತ್ತರ ವಿಷಯಗಳು ಚರ್ಚೆಯಾಗಿವೆ..
ಮೊದಲಿಗೆ ಬೂಬಾಡಿಗೆ ಗುತ್ತಿಗೆಯ ವಿಷಯದ ಕುರಿತಾಗಿ ನಗರ ಸೇವಕ ಹನುಮಂತ ಕೊಂಗಾಲಿ ಅವರು ಕೇಳಿದ ಪ್ರಶ್ನೆಗೆ, ಪರಿಷತ್ ಸಭೆಯಲ್ಲಿ ಆದ ತೀರ್ಮಾನದಂತೆ ನಡೆದುಕೊಂಡಿದ್ದು, ಹಿಂದಿನ ಗುತ್ತಿಗೆದಾರರು 1ಕೋಟಿ 12 ಲಕ್ಷ ಎಲ್ಲವನ್ನೂ ತುಂಬಿದ್ದಾರೆ, ಅವರ ಗುತ್ತಿಗೆ ಮುಗಿದಿದ್ದು, ಗುತ್ತಿಗೆ ಕರೆಯದ ಕಾರಣ ಮೂಲ ಗುತ್ತಿಗೆದಾರ ಕಿಶೋರ ಮುತಗೇಕರ ಅವರಿಗೆ ಶೆ10ರಷ್ಟು ಹೆಚ್ಚಿಸಿ ತಾತ್ಕಾಲಿಕ (ಟೆಂಡರ್ ಆಗುವ ವರೆಗೆ) ಬೂಬಾಡಿಗೆ ವಸೂಲಿ ಮಾಡಲು ಆದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು..
ಮತ್ತೆ, ನಗರ ಸೇವಕ ಹಣಮಂತ ಕೊಂಗಾಲಿ ಅವರು ಬುಬಾಡಿಗೆ ಗುತ್ತಿಗೆಯ ನಿಯಮಗಳನ್ನು ಹಾಗೂ ಅವುಗಳ ಅನ್ವಯದ ಬಗ್ಗೆ ಕೇಳಿದಾಗ, ಒಂದಿಷ್ಟು ಅಧಿಕಾರಿಗಳು ಹಾಗೂ ನಗರ ಸೇವಕರು ಬೂಬಾಡಿಗೆಯ ಗುತ್ತಿಗೆದಾರರ ಪರ ಹಾಗೂ ವಿರೋಧ ಮಾತನಾಡಿ, ವಾದ ವಿವಾದಗಳಿಂದ ಸಭೆಯ ವಾತಾವರಣ ಸ್ವಲ್ಪ ಹೊತ್ತು ಗಂಭೀರವಾಗಿರುವ ಪರಿಸ್ಥಿತಿ ಉಂಟಾಗಿತ್ತು..
ಇನ್ನು ಲೀಸ್ ಮುಗಿದ ಪಾಲಿಕೆಯ ಆಸ್ತಿಗಳ ಬಗ್ಗೆ ಮಾಹಿತಿ ಕೇಳಿದಾಗ ಒಟ್ಟು 91 ಆಸ್ತಿಗಳಿದ್ದು ಅದರಲ್ಲಿ 78 ಲೀಸ್ ಮುಗಿದಿದ್ದು, ಅದರಲ್ಲಿ 17 ನ್ಯಾಯಾಲಯದಲ್ಲಿ ಪ್ರಕರಣ ಇವೆ, ಬಾಕಿ ಇರುವ ಪ್ರಕರಣಗಳು 13 ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
2017-18 ರಲ್ಲಿ ಶಶಿಧರ ಕುರೆರ ಅವರು ಆಯುಕ್ತರಾಗಿದ್ದಾಗ ಆದೇಶ ಮಾಡಿದ್ದು, 78 ಆಸ್ತಿಗಳ ಲೀಸ್ ಮುಗಿದರೂ ಕೂಡಾ ಪಾಲಿಕೆ ಆ ಆಸ್ತಿಗಳನ್ನು ಇನ್ನೂ ಕಬ್ಜ ತೆಗೆದುಕೊಂಡಿಲ್ಲ, ಇದರ ಕುರಿತಾಗಿ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಮುಜಮಿಲ್ ದೋಣಿ ಅವರು ಮಾತನಾಡಿ, 6 ವರ್ಷವಾದರೂ ಆ ಆಸ್ತಿಗಳಿಂದ ನೀವು ಪಾಲಿಕೆಗೆ ತೆರಿಗೆ ಸಂಗ್ರಹಿಸಿಲ್ಲ, ಹಾಗೂ ಕಬ್ಜಾನೂ ಪಡೆದಿಲ್ಲ ಅಂದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು..
ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾಪೌರರು ಅಧಿಕಾರಗಳ ಮೇಲೆ ರೆಗಿದ್ದು, ಯಾವುದೇ ನಿಬಂದನೆಗಳಿಲ್ಲದೇ ನೀವು ಪಾಲಿಕೆಯ ಆಸ್ತಿಗಳನ್ನು ಲೀಸ್ ನೀಡಿದರೆ, ಲೀಸ್ ಪಡೆದ ಎಲ್ಲರೂ ನ್ಯಾಯಾಲಯಕ್ಕೆ ಹೋಗುವರು, ಕೇಸ್ ವರ್ಕರ್ ಆಗಿ ತಾವು ಏನು ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು..
ಕಂದಾಯ ಇಲಾಖೆಯವರು ಕೆಲಸ ಬರೀ ಪಿಐಡಿ ನೀಡುವದು ಖಾತಾ ಬದಲಾವಣೆ ಮಾಡುವದು ಅಷ್ಟೇ ಅಲ್ಲಾ, ಪಾಲಿಕೆಯ ಆಸ್ತಿಯನ್ನು ಕಾಯುವುದು ಕೂಡಾ ನಿಮ್ಮ ಕೆಲಸ,
ನೀವೇ ನೋಟಿಸ್ ನೀಡುತ್ತೀರಾ ಮತ್ತೆ ನೀವೇ ಕೋರ್ಟಿಗೆ ಹೋಗುವ ದಾರಿ ಹೇಳಿಕೊಡುತ್ತಿರಾ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪೋತದಾರ ಶಾಲೆಯ ತೆರಿಗೆ ವಿಷಯ ಬಂದಾಗ, ನಗರ ಸೇವಕ ಗಿರೀಶ ದೊಂಗಡಿ ಮಾತನಾಡಿ, ಅನಧಿಕೃತ ಆಸ್ತಿ, ಅಧಿಕೃತ ಆಗಿದ್ದು ಹೇಗೆ, ಅನಧಿಕೃತ ಯಾವ ದಾಖಲೆಗಳ ಮೇಲೆ ಮಾಡಿದ್ದೀರಾ? ಈಗ ಅಧಿಕೃತ ಅಂತ ಹೇಗೆ ಮಾಡಿದ್ದೀರಾ ಅದರ ಬಗ್ಗೆ ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡಿ ಎಂದು ಸಮಿತಿಯ ಅಧ್ಯಕ್ಷರು ಸೂಚಿಸಿದರು..
ಇನ್ನು ಅಡ್ರೆಸ್ ಅಪಾರ್ಟಮೆಂಟ್ ಬಗ್ಗೆ ವಿಷಯ ಪ್ರಸ್ತಾಪ ಆಗಿದ್ದು ಅದರ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆಹಾಕಿ ವರದಿ ನೀಡಬೇಕು ಎಂದು ನಗರ ಸೇವಕರು ಒತ್ತಾಯ ಮಾಡಿದರು.
ಇನ್ನು ಪಾಲಿಕೆಯ ವಲಯ ಕಚೇರಿಗಳಿಗೆ ಕಚೇರಿಯ ಪೀಠೋಪಕರಣಗಳು, ಸಿಸಿ ಕ್ಯಾಮೆರಾ ಹಾಗೂ ಯುಪಿಎಸ್ ವ್ಯವಸ್ಥೆ ಮಾಡಬೇಕು ಎಂದು ನಗರ ಸೇವಕರ ಒಮ್ಮತದ ಬೇಡಿಕೆಯಿಟ್ಟಿದ್ದು, ಸರ್ವಾನುಮತದ ಒಪ್ಪಿಗೆ ಸೂಚಿಸಲಾಗಿದೆ..
ಇನ್ನು ಈ ಕಂದಾಯ ಮತ್ತು ತೆರಿಗೆ ಸುಧಾರಣಾ ಸ್ಥಾಯಿ ಸಮಿತಿಯ ಸಭೆಯಲ್ಲಿ ಪಾಲಿಕೆಯ ಮಹಾಪೌರರು, ಉಪಮಹಾಪೌರರು, ಸಮಿತಿಯ ಅಧ್ಯಕ್ಷರು, ಆಡಳಿತ ಪಕ್ಷದ ನಾಯಕರು, ಸಮಿತಿ ಸದಸ್ಯರು, ವಿರೋಧ ಪಕ್ಷದ ನಾಯಕರು ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..