Wednesday, October 15, 2025
Google search engine
Homeರಾಜ್ಯಅಧಿವೇಶನಕ್ಕೂ ಮುನ್ನ ಸರ್ಕಾರ ಒಳಮೀಸಲಾತಿ ನೀಡಬೇಕು:ಗೋವಿಂದ್ ಕಾರಜೋಳ
spot_img

ಅಧಿವೇಶನಕ್ಕೂ ಮುನ್ನ ಸರ್ಕಾರ ಒಳಮೀಸಲಾತಿ ನೀಡಬೇಕು:ಗೋವಿಂದ್ ಕಾರಜೋಳ

filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (0.31120333, 0.5077083);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 42;

ಬೆಳಗಾವಿ: ರಾಜ್ಯ ಸರ್ಕಾರ ಅಧಿವೇಶನಕ್ಕೂ ಮುನ್ನ ಸರ್ಕಾರ ಒಳಮೀಸಲಾತಿ ನೀಡಬೇಕು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ‌ ಆಗ್ರಹಿಸಿದರು.ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದರಾಗಿ ಗೋವಿಂದ್ ಕಾರಜೋಳ ಎಚ್ಚರಿಕೆ‌ ನೀಡಿದರು.

ಬೆಳಗಾವಿ ಜಿಲ್ಲಾ ಮಾದರ ಮಹಾ ಒಕ್ಕೂಟದಿಂದ ನಡೆದ ಸುದ್ಧಿಗೋಷ್ಠಿಯಲ್ಲಿ  ಸಂಸದ ಗೋವಿಂದ್ ಕಾರಜೋಳ, ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಶಾಸಕ ದುರ್ಯೋಧನ ಐಹೊಳೆ ಜಂಟಿ ಸುದ್ಧಿಗೋಷ್ಠಿ ನಡೆಸಿದರು.

ಕರ್ನಾಟಕದಲ್ಲಿ ಮಂತ್ರಿ, ಶಾಸಕರು, ಎಂಪಿ ಆದವರಿಗೆ ಮೀಸಲಾತಿ ಯಾಕೇ ತಂದ್ರು ಅನ್ನೋ ಕಲ್ಪನೆಯಲ್ಲಿದ್ದಾರೆ ಇಂತಹವರು ಆಳ್ವಿಕೆ‌ ಮಾಡ್ತಿರೋದು ದುರ್ದೈವದ ಸಂಗತಿ ಎಂದರು.ಎಸ್ಸಿ, ಎಸ್ಟಿ ಸಮಾಜಕ್ಕೆ ಸಂವಿಧಾನದಲ್ಲಿ ಮೀಸಲಾತಿ ನೀಡಲಾಯಿತು.

ಎಸ್ಸಿಯಲ್ಲಿ 101, ಎಸ್ಟಿಯಲ್ಲಿ 51 ಜಾತಿಗಳನ್ನ‌ ಕಾಲಕಾಲಕ್ಕೆ ಸೇರಿಸಿದ್ರು ಅವರನ್ನ ನಾವು ಸ್ವಾಗತ‌ ಮಾಡಿಕೊಂಡಿದ್ದೇವೆ ಇವತ್ತು ರಾಜಕೀಯ ಗಂಧ ಗೊತ್ತಿಲ್ಲದವರು ಮೀಸಲಾತಿ ವೋಟ್ ಬ್ಯಾಂಕ್ ಅಂದುಕೊಂಡಿದ್ದಾರೆ ಈ ದೇಶದಲ್ಲಿ ಅಸ್ಪೃಶ್ಯ ಜನಾಂಗವನ್ನು ಮೇಲಕ್ಕೆ ತರಲು ಮೀಸಲಾತಿ ಕೊಟ್ಟಿದ್ದಾರೆ.

ಶಿಕ್ಷಣ, ರಾಜಕೀಯ, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ ಎಸ್.ಎಂ.ಕೃಷ್ಣಾ ‌ಸರ್ಕಾರದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆ ಮಾಡಿದ್ರು‌ ಆಗ ಸದಾಶಿವ ಅವರು ಮೂಲಭೂತ ಸೌಲಭ್ಯ ಕೊಡದಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ರು ಆಗ ಯಡಿಯೂರಪ್ಪ ಅವರು ಆಯೋಗಕ್ಕೆ 13 ಕೋಟಿ ಹಣ ಕೊಟ್ಟರು ಅದೇ 2013 ರಿಂದ ಈವರೆಗೂ ಸಿಎಂ ಸಿದ್ದರಾಮಯ್ಯ ಅವರು ನ್ಯಾಯ ಒದಗಿಸಲಿಲ್ಲ.

ನಮ್ಮ ಸರ್ಕಾರ ಬಂದ ಮೇಲೆ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಮಾಡಿದ್ರು‌ ಒಳ ಮೀಸಲಾತಿಯಲ್ಲಿ ಮಾದಿಗ ಸೇರಿ ಕೆಲ ಸಮುದಾಯಕ್ಕೆ 17 ರಷ್ಟು ಮೀಸಲಾತಿ ನೀಡಿದ್ರು ಆಂದ್ರಪ್ರದೇಶ, ತೆಲಂಗಾಣ, ಪಂಜಾಬ್ ದಲ್ಲಿ ಎಸ್ಸಿಯವರಿಗೆ ಒಳ ಮೀಸಲಾತಿ ನೀಡಿದ್ದಾರೆ.

ಅದೇ ಕರ್ನಾಟಕದಲ್ಲಿ ಒಳ ಮೀಸಲಾತಿಯನ್ನ ಖರ್ಗೆಯವರು ಎಐಸಿಸಿ ಅಧ್ಯಕ್ಷರಿದ್ದರೂ, ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು ಕೊಟ್ಟಿಲ್ಲ. ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಕೊಟ್ಟು ಆಗಷ್ಟ್ 1ಕ್ಕೆ ಒಂದು ವರ್ಷ ಆಗಲಿದೆ ಆಗಷ್ಟ್ 11 ರಿಂದ ಅಧಿವೇಶನ ಆರಂಭವಾಗಲಿದೆ.

ಅಧಿವೇಶನಕ್ಕೂ ಮುನ್ನವೇ ಒಳ‌ಮೀಸಲಾತಿ ಕೊಡಬೇಕು. ಆಗಷ್ಟ್ 16 ರಂದು ಮಾದಿಗ ಸಮುದಾಯ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಸರ್ಕಾರಕ್ಕೆ ಆಡಳಿತ ಮಾಡಲು ಬಿಡುವುದಿಲ್ಲ. ಮಂತ್ರಿಗಳು ರಸ್ತೆ ಮೇಲೆ ಓಡಾಡಲು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಕಾರಜೋಳ ಎಚ್ಚರಿಕೆ ನೀಡಿದರು.

RELATED ARTICLES
- Advertisment -spot_img

Most Popular

error: Content is protected !!