ಬೆಳಗಾವಿ: ಪೋಷಕರು ಮಗನನ್ನ ಹುಡುಕಲು ಮುಧೋಳ ತಾಲೂಕಿನಿಂದ ಧಾರವಾಡ ಕಡೆ ಪ್ರಯಾಣ ಬೆಳಸಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ ಬಳಿ ಬುಧವಾರ (ಜುಲೈ 23) ರಂದು ನಡೆದಿದೆ.
ಬಾಲಕನ ತಂದೆ ರಂಗನಾಥ ಶಿರಗಾವಿ ಕಾಲು ಮುರಿದಿದ್ದು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.