Monday, December 23, 2024
Google search engine
Homeರಾಜ್ಯರಾಜರತ್ನ ಪುನೀತ್ ರಾಜಕುಮಾರ ಮರೆಯಾಗಿ 3 ಮೂರು ವರ್ಷ: ಸಮಾಧಿ ಬಳಿ ಜಮಾಯಿಸಿದ ಅಭಿಮಾನಿ ದೇವರುಗಳು

ರಾಜರತ್ನ ಪುನೀತ್ ರಾಜಕುಮಾರ ಮರೆಯಾಗಿ 3 ಮೂರು ವರ್ಷ: ಸಮಾಧಿ ಬಳಿ ಜಮಾಯಿಸಿದ ಅಭಿಮಾನಿ ದೇವರುಗಳು

ಬೆಂಗಳೂರು : ರಾಜರತ್ನ, ದೊಡ್ಮನೆ ಹುಡುಗ ನಮ್ಮನಗಲಿ ಇಂದಿಗೆ ಮೂರು ವರ್ಷವಾಗಿದ್ದು. ಕಂಠೀರವ ಸ್ಟುಡೀಯೋದಲ್ಲಿ ರಾಜ್​ ಕುಟುಂಬ ಬಂದು ಅಗಲಿದ ಪುನೀತ್​ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ನೆನ್ನೆ ರಾತ್ರಿಯಿಂದಲೇ ಪುನೀತ್​ ಸಮಾಧಿಯ ಬಳಿ ಅಭಿಮಾನಿಗಳು ಜಮಾಯಿಸಿದ್ದು. ಅಪ್ಪು ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ.

ನೆನಪಿಸಿಕೊಳ್ಳುವುದೇ ಒಂದು ರೀತಿಯ ಸಂಕಟದ ವಿಷಯ. ಆದರೆ ದೈಹಿಕವಾಗಿ ಪರಮಾತ್ಮ ನಮ್ಮನಗಲಿ ಇಂದಿಗೆ 3 ವರ್ಷಗಳು ಕಳೆದಿವೆ. ಆದರೆ ಅವರ ನೆನಪುಗಳು ಇಂದಿಗು ಅಚ್ಚಹಸಿರಾಗಿದೆ. ಇಂದು ಅವರ ಪುಣ್ಯ ತಿಥಿ ಹಿನ್ನಲೆ ಪುನಿತ್​ ಪತ್ನಿ ಅಶ್ವಿನಿ ಪುನೀತ್​ರಾಜ್​ಕುಮಾರ್, ಅವರ ಪುತ್ರಿಯರು, ರಾಘವೇಂದ್ರ ರಾಜ್​ಕುಮಾರ್​ ಸೇರಿದಂತೆ ಅಪ್ಪು ಕುಟುಂಬಸ್ಥರು ಇಂದು ಬೆಳಿಗ್ಗೆಯೆ ಬಂದು ಅಪ್ಪು ಸಮಾಧಿಗೆ ವಿವಿಧ ಭಕ್ಷಬೋಜ್ಯಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ಹೊಸಪೇಟೆ ಪುನೀತ್​ ರಾಜ್​ಕುಮಾರ್​ ಅಭಿಮಾನಿ ಬಳಗದಿಂದಲು ಅನ್ನ ಸಂತರ್ಪಣೆ ಮಾಡಲಾಗುತ್ತಿದೆ.

ಪುನೀತ್ ನಮ್ಮೊಂದಿಗಿಲ್ಲ ಎಂದು ಬಹುಷಃ ಯಾರಿಗು ಅನಿಸುವುದಿಲ್ಲ. ಅವರು ಬದುಕಿದ್ದಕ್ಕಿಂತ ಹೆಚ್ಚಾಗಿ, ಇವಾಗಲೇ ನೆನಪಿನಲ್ಲಿ ಉಳಿದ್ದಿದ್ದಾರೆ. ಅವರ ಸಿನಿಮಾದ ಸಂಭಾಷಣೆಯ ಹಾಗೆ ಜೊತೆಗಿರದ ಜೀವ, ಎಂದೆಂದೂ ಜೀವಂತ. ಕರ್ನಾಟಕ ಚಿತ್ರರಂಗ, ಕರ್ನಾಟಕದ ಜನತೆ ಎಂದಿಗೂ ಅವರನ್ನು ಮರೆಯುವುದಿಲ್ಲ. ಅವರು ಜನರ ಮನಸ್ಸಿನಲ್ಲಿ ಎಂದಿಗೂ ಅಜರಾಮರ ಆಗಿರುತ್ತಾರೆ.

RELATED ARTICLES
- Advertisment -spot_img

Most Popular

error: Content is protected !!