ಬೆಳಗಾವಿ: ಜಿಲ್ಲೆಯ ರಾಯಭಾಗ ತಾಲೂಕಿನ ಮೇಖಳಿ ಗ್ರಾಮದ ರಿ.ಸಂ ಸಂಖ್ಯೆ 225/* ಪೈಕಿ 21 ಎಕರೆ 23 ಗುಂಟೆ ಸರ್ಕಾರದ ಗಾಯರಾಣ ಜಮೀನು ಭೂಮಿ ಒತ್ತುವರಿಯಾಗಿದೆ.
ಮೇಖಳಿಯಿಂದ ನಾಗರಮುನ್ನೂಳಿ ಹೋಗುವ ದಾರಿಯಲ್ಲಿ ಕಂದಾಯ ಇಲಾಖೆಯಲ್ಲಿ ಬರುವ ಸರಕಾರಿ ಗಾಯರಾಣ ಖಾಲಿ ಜಾಗವನ್ನು ಸ್ವಾಮಿಜೀಯವರು ಅತಿಕ್ರಮಣ ಮಾಡಿಕೊಂಡಿರುವ
ಮಠಕ್ಕಾಗಿ ಬಳಸಿಕೊಂಡು ಈಗಾಗಲೇ ಜಮೀನಿನಲ್ಲಿ ಯಾವುದೇ ರೀತಿಯ ಪರವಾನಿಗೆಯನ್ನು ಪಡೆಯದೆ ಒಂದು ಮಠವನ್ನು ನಿರ್ಮಾಣ ಮಾಡಲಾಗಿದೆ.
ಅಲ್ಲದೇ ಸರ್ಕಾರದಿಂದಲ್ಲೂ ಸ್ವಾಮಿಜೀಯವರಿಗೆ, ಮಠಕ್ಕೆ ಜಾಮೀನು ಹಸ್ತಾಂತರ ಮಾಡಿರುವುದಿಲ್ಲ. ಇದನ್ನೆಲ್ಲ ಪರಗಣಿಸಿದರೆ ಸರ್ಕಾರದ ಕಣ್ಣಿನಲ್ಲಿ ಮಣ್ಣುರೆಚ್ಚುವ ಕಾರ್ಯವಾಗಿದೆ.
ಈ ಭೂ ಕಬಳಿಕೆಯೂ ಊರಿನ ಲೆಕ್ಕಾಧಿಕಾರಿ ಮತ್ತು ರಾಯಾಭಾಗ ತಹಶಿಲ್ದಾರರ ಗಮನಕ್ಕೂ ಬಂದರು ಸಹ ಯಾವುದೇ ರೀತಿ ಕ್ರಮ ತೆಗೆದುಕೊಂಡಿರುವುದಿಲ್ಲ ಅನುಮಾನಾಸ್ಪದ ಅಚ್ಚರಿಯ ಸಂಗತಿ. ಈ ಭೂ ಅತಿಕ್ರಮಣಕ್ಕೆ ಸ್ಥಳೀಯ ಅಧಿಕಾರಿಗಳ ಕೈವಾಡವು ಇರಬಹುದು ಎಂದು ಭಾಸವಾಗುತ್ತಿದೆ.
ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದರು ತಹಶಿಲ್ದಾರ ಅವರು ಕಂಡು ಕಾಣದ ಹಾಗೇ ಸುಮ್ಮನೇ ಕುಳ್ಳಿತಿರುವುದೇ ಅನುಮಾನಕ್ಕೆ ಕಾರಣವಾಗುತ್ತಿದೆ.
ಇಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣವೇ ತಹಶೀಲ್ದಾರ್ ಜಾಮೀನು ದಾಖಲೆಗಳನ್ನು ಪರಿಶೀಲಿಸಿ, ಕ್ರಮ ವಹಿಸಬೇಕು. ಆದರೆ ಅಂತಹ ಯಾವುದೇ ಬದಲಾವಣೆ ಕಾಣದೆ ಇರುವುದು ಮಾತ್ರ ಭೂ ಕಬಳಿಕೆ ಕೈವಾಡಕ್ಕೆ ಕನ್ನಡಿಯಾಗಿದೆ.
ಇಷ್ಟು ದೊಡ್ಡ ಭೂ ಕಬಳಿಕೆಯಾಗಿದ್ದರೂ ಎಲ್ಲಿಯೂ ಬಹಿರಂಗವಾಗದೆ ಕಟ್ಟಡ ಮಾತ್ರ ಭರದಿಂದ ಸಾಗುತ್ತಿದೆ.
ಜಿಲ್ಲಾಡಳಿತ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ.