Monday, December 23, 2024
Google search engine
Homeರಾಜಕೀಯಬಿವೈ ವಿಜಯೇಂದ್ರ ಇದ್ದಲ್ಲಿ ನಾನು ಇರಲ್ಲ; ಅವನ್ಯಾರು ನನ್ನ ಪ್ರಚಾರಕ್ಕೆ ಕರೆಯೋಕೆ: ರಮೇಶ್‌ ಜಾರಕಿಹೊಳಿ

ಬಿವೈ ವಿಜಯೇಂದ್ರ ಇದ್ದಲ್ಲಿ ನಾನು ಇರಲ್ಲ; ಅವನ್ಯಾರು ನನ್ನ ಪ್ರಚಾರಕ್ಕೆ ಕರೆಯೋಕೆ: ರಮೇಶ್‌ ಜಾರಕಿಹೊಳಿ

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವದ ನೇತೃತ್ವದಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ, ವಿಜಯೇಂದ್ರ ನಾಯಕತ್ವ ನಾನು ಒಪ್ಪುವುದಿಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಜವಾಬ್ದಾರಿ ಬೇಡಾ, ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಕೊಡಿ ಅವರ ಜೊತೆ ಸೇರಿ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದೇನೆ. ಅಕ್ಕಲಕೋಟ, ಸೋಲಾಪುರ, ಜತ್ತ ಸೇರಿದಂತೆ ಕನ್ನಡದ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಹೇಳಿದ್ದರು. ನಾನು ನೀರಾವರಿ ಇಲಾಖೆ ಸಚಿವನಾಗಿದ್ದಾಗ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪಾರ್ಟ್‌ ಟೈಮ್ ನೀರಾವರಿ ಸಚಿವ ಹೆಚ್ಚಿನ ಸಮಯ ಬಿಬಿಎಂಪಿಯಲ್ಲಿಯೇ ಮಹತ್ವ ಕೊಡುತ್ತಾರೆ. ದಯಮಾಡಿ ಫುಲ್‌ ಟೈಮ್ ನೀರಾವರಿ ಸಚಿವರನ್ನು ಸರಕಾರ ನೇಮಕ ಮಾಡಬೇಕೆಂದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ ಒಳ್ಳೆಯ ಹೋರಾಟಗಾರ. ಅವನಿಗೆ ಅನ್ಯಾಯವಾಯಿತು. ಅದಕ್ಕೆ ಕಾಂಗ್ರೆಸ್ ಹೋಗಿ ಚನ್ನಪಟ್ಟಣದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾನೆ. ಗೆಲ್ಲುತ್ತಾನೋ ಸೋಲುತ್ತಾನೋ ಗೊತ್ತಿಲ್ಲ ಎಂದರು‌.

RELATED ARTICLES
- Advertisment -spot_img

Most Popular

error: Content is protected !!