Tuesday, April 29, 2025
Google search engine
Homeರಾಷ್ಟ್ರೀಯಪೌರತ್ವ ತಿದ್ದುಪಡಿ (CAA) ಭರವಸೆಯನ್ನುಈಡೇರಿಸಿದ್ದೇವೆ:ಕೇಂದ್ರ ಗೃಹ ಸಚಿವ ಅಮಿತ್ ಶಾ
spot_img

ಪೌರತ್ವ ತಿದ್ದುಪಡಿ (CAA) ಭರವಸೆಯನ್ನುಈಡೇರಿಸಿದ್ದೇವೆ:ಕೇಂದ್ರ ಗೃಹ ಸಚಿವ ಅಮಿತ್ ಶಾ

ತೆಲಂಗಾಣದಲ್ಲಿ ನಡೆದ ‘ಸಮಾಜಿಕ ಜಾಲತಾಣ ಹೋರಾಟಗಾರರ ಭೇಟಿ’ ಮತ್ತು ‘ವಿಜಯ್ ಸಂಕಲ್ಪ ಸಮ್ಮೇಳನ’ದ ವೇಳೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ದೇಶಾದ್ಯಂತ ಸಿಎಎ (CAA) ಜಾರಿಗೊಳಿಸುವ ಭರವಸೆಯನ್ನು ನೀಡಿತ್ತು. 2024 ರಲ್ಲಿ, ನಾವು ಸಿಎಎ ಭರವಸೆಯನ್ನು ಪೂರೈಸಿದ್ದೇವೆ. CAA ಅಡಿಯಲ್ಲಿ ಯಾವುದೇ ನಾಗರಿಕರ ಪೌರತ್ವವನ್ನು ರದ್ದುಗೊಳಿಸಲಾಗುವುದಿಲ್ಲ; ಇದು ಪೌರತ್ವವನ್ನು ನೀಡುವ ಕಾನೂನು, ಕಸಿದುಕೊಳ್ಳುವ ಕಾನೂನಲ್ಲ.


ಅಭಿವೃದ್ಧಿ ಮತ್ತು ‘ಅಂತ್ಯೋದಯ’ ರಾಜಕಾರಣಕ್ಕೆ ಹೆಸರು ವಾಸಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಹಿಂದೂ, ಸಿಖ್, ಬೌದ್ಧ ಮತ್ತು ಜೈನ ನಿರಾಶ್ರಿತರಿಗೆ ಪೌರತ್ವ ನೀಡುವುದಾಗಿ ಭರವಸೆ ನೀಡಿದ್ದರು. ಎಲ್ಲಾ ವಿರೋಧಗಳ ನಡುವೆಯೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2024 ರಲ್ಲಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡು, ಸಿಎಎಯನ್ನು ದೇಶಾದ್ಯಂತ ಯಶಸ್ವಿಯಾಗಿ ಜಾರಿಗೆ ತಂದರು. ಇದರ ಅಡಿಯಲ್ಲಿ ಆ ದೇಶಗಳಿಂದ ಕಿರುಕುಳಕ್ಕೊಳಗಾದ ಲಕ್ಷಾಂತರ ಹಿಂದೂ, ಸಿಖ್, ಬೌದ್ಧ ಮತ್ತು ಜೈನ ನಿರಾಶ್ರಿತರಿಗೆ ಪೌರತ್ವವನ್ನು ನೀಡಲಾಗುವುದು. ಇಂದು ಅಮೃತ ಕಾಲದಲ್ಲಿ ಶೋಷಣೆಗೆ ಒಳಗಾದ ನಿರಾಶ್ರಿತರಿಗೆ ಪೌರತ್ವ ನೀಡಲಾಗುತ್ತಿದ್ದು, ಗೌರವಯುತ ಜೀವನ ನಡೆಸುವ ಅವರ ಆಶಯವನ್ನು ಈಡೇರಿಸಲಾಗುತ್ತಿದೆ. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ರಾಜಕಾರಣದಿಂದ ಸಿಎಎಯನ್ನು ಜಾರಿಗೆ ತಂದಿರಲಿಲ್ಲ.

ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಜ್ಲಿಸ್ ಪ್ರಭಾವವನ್ನು ತಗ್ಗಿಸಲು ತೆಲಂಗಾಣ ಜನತೆ ಕಾಂಗ್ರೆಸ್ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ತೆಲಂಗಾಣ ವಿಧಾನಸಭೆ ಆರಂಭವಾದ ಕೂಡಲೇ ಮಜ್ಲಿಸ್ ನಾಯಕನನ್ನೆ ಹಂಗಾಮಿ ಸ್ಪೀಕರ್ ಮಾಡಲು ಕಾಂಗ್ರೆಸ್ ಶ್ರಮಿಸಿತ್ತು.

370ನೇ ವಿಧಿ ರದ್ದತಿಯಾಗಿರಲಿ, ಭವ್ಯ ರಾಮ ಮಂದಿರ ನಿರ್ಮಾಣವಾಗಲಿ, ತ್ರಿವಳಿ ತಲಾಖ್ ನಿರ್ಮೂಲನೆಯಾಗಲಿ – ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರವು ನೀಡಿದ ಪ್ರತಿ ಭರವಸೆಯನ್ನು ಈಡೇರಿಸಿದೆ ಎಂಬುದು ದೇಶದ ನಾಗರಿಕರಿಗೆ ತಿಳಿದಿದೆ. ಲೋಕಸಭೆ ಚುನಾವಣೆಗೆ ಮುನ್ನ ಸಿಎಎ ಅನುಷ್ಠಾನವು ಅಮಿತ್ ಶಾ ಅವರ ಚಾಣಕ್ಯ ನೀತಿಗಳಲ್ಲಿ ಒಂದಾಗಿದೆ.

2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಕಣದಲ್ಲಿ ರಾಜಕೀಯ ಪಕ್ಷಗಳು ಮುಖಾಮುಖಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರು ಮತ್ತೊಮ್ಮೆ ಕಮಲವನ್ನು ಅರಳಿಸಿ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಸನ್ನದ್ಧಗಿದ್ದಾರೆ. ಭಾರತದ ರಾಜಕೀಯದ ‘ಚಾಣಕ್ಯ ಅಮಿತ್ ಶಾ ಅವರ ಚುನಾವಣಾ ತಯಾರಿ, ಚುನಾವಣಾ ಪೂರ್ವ ಕಾರ್ಯತಂತ್ರಗಳು ಮತ್ತು ಸಂಘಟನೆಯ ಕಡೆಗೆ ಅವರಿಗಿರುವ ಶ್ರದ್ಧೆ ನೋಡಿದರೆ, ಯಾವುದೇ ಚುನಾವಣೆಯ ಫಲಿತಾಂಶವು ಅವರ ಪರವಾಗಿರುತ್ತದೆ ಎಂದು ಭಾವಿಸುವುದು ಸುರಕ್ಷಿತ. ಒಂದು ಕಾಲದಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಬಿಜೆಪಿಯ ಸ್ಥಿತಿ ಅತ್ಯಂತ ದುರ್ಬಲವಾಗಿದ್ದಾಗ, ಅಮಿತ್ ಶಾ ತಮ್ಮ ಕಾರ್ಯತಂತ್ರಗಳ ಮೂಲಕ ಬಿಜೆಪಿಯನ್ನು ಪ್ರಬಲ ಸ್ಥಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ರಾಜಕೀಯದಲ್ಲಿ ‘ಮೋದಿ ಮ್ಯಾಜಿಕ್’ನಂತೆ, ಯಾವುದೇ ಚುನಾವಣೆಯಲ್ಲಿ ಮತ ಗಳಿಸಲು ಅಮಿತ್ ಶಾ ಹೆಸರು ಸಾಕು. ಮೋದಿ ಸರ್ಕಾರದ ಸಾಧನೆಗಳು ಮತ್ತು ಪೂರೈಸಿದ ಭರವಸೆಗಳ ಆಧಾರದ ಮೇಲೆ ಈ ಬಾರಿ 400 ಕ್ಕೂ ಅಧಿಕ ಸ್ಥಾನಗಳ ಜೊತೆ ನರೇಂದ್ರ ಮೋದಿ ಸರ್ಕಾರ ಪ್ರಬಲ ಪುನರಾಗಮನವನ್ನು ಮಾಡುವುದು ಖಚಿತವಾಗಿದೆ.

RELATED ARTICLES
- Advertisment -spot_img

Most Popular

error: Content is protected !!