ಬೆಳಗಾವಿ : ಇನ್‌ಸ್ಟಿಟ್ಯೂಟ್‌ನ ಎರಡನೇ ವರ್ಷದ ಬಿ.ಪಿ.ಟಿ ವಿದ್ಯಾರ್ಥಿನಿ ಈಶಾ ಭಾರತ ಪಾಟೀಲ್ ಅವರು ಜೂನ್ 6 ರಿಂದ ಜೂನ್ 8 ರವರೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ 4ನೇ ರಾಷ್ಟ್ರೀಯ ಹಿರಿಯ ಕಝಾಕ್ ಕುರೆಸ್ ಚಾಂಪಿಯನ್‌ಷಿಪ್ 2025 ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಂಗಾರ ಪದಕ ಗೆದ್ದಿದ್ದಾರೆ.
ಕಝಾಕ್ ಕುರೆಸ್ ಎಂಬ ಕಝಾಕಿಸ್ತಾನದ ಪರಂಪರೆಯ ಕುಸ್ತಿ ಶೈಲಿಗೆ “Born Bold” ಎಂಬ ಅಂತರಾಷ್ಟ್ರೀಯ ಪ್ರಚಾರ ಅಭಿಯಾನದ ಮೂಲಕ ಜಾಗತಿಕ ಗುರುತಿನ ಘಳಿಗೆ ಬಂದಿದೆ. ಈಶಾ ಅವರು ದೇಶದ ವಿವಿಧ ಭಾಗಗಳಿಂದ ಬಂದ ಪ್ರತಿಷ್ಠಿತ ಪೈಲ್ವಾನರ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.
ಈಶಾ ಅವರ ಸಾಧನೆಗೆ ಇನ್ನೊಂದು ಹೆಗ್ಗುರುತು ಎಂದರೆ, ಅವರು ಇದೀಗ ಜಾರ್ಜಿಯಾದಲ್ಲಿ ನಡೆಯಲಿರುವ ವಿಶ್ವ ಕಝಾಕ್ ಕುರೆಸ್ ಚಾಂಪಿಯನ್‌ಷಿಪನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಕೆ.ಎಲ್.ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (KAHER) ಫಿಜಿಯೋಥೆರಪಿ ಇನ್‌ಸ್ಟಿಟ್ಯೂಟ್ ಬೆಳಗಾವಿ ,ಇವರು ಈ ಸಂಧರ್ಭದಲ್ಲಿ ಹೆಮ್ಮೆಪಡುವಂತಹ ಕ್ಷಣವನ್ನು ಕಂಡಿದೆ.ಕೆ.ಎ.ಎಚ್.ಇ.ಆರ್ ಸಂಸ್ಥೆ ಈಶಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯಕ್ಕೆ ಶುಭ ಹಾರೈಸಿದೆ.