Thursday, October 16, 2025
Google search engine
Homeರಾಷ್ಟ್ರೀಯಕಾಂಗ್ರೆಸ್ ಆಡಳಿತ ಇರೋ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಸಚಿವೆ ಅನ್ನಪೂರ್ಣಾದೇವಿ ಗಂಭೀರ ಆರೋಪ
spot_img

ಕಾಂಗ್ರೆಸ್ ಆಡಳಿತ ಇರೋ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಸಚಿವೆ ಅನ್ನಪೂರ್ಣಾದೇವಿ ಗಂಭೀರ ಆರೋಪ

ಬೆಳಗಾವಿ ; ಕಾಂಗ್ರೆಸ್ ಆಡಳಿತ ಇರೋ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಹಣವಿಲ್ಲದೇ ಜನ ಸಾಮಾನ್ಯರ ಕೆಲಸಗಳು ರಾಜ್ಯದಲ್ಲಿ ಆಗುತ್ತಿಲ್ಲ. ಕಾಂಗ್ರೆಸ್ ಆಡಳಿತ ಇರೋ ರಾಜ್ಯ ಸರ್ಕಾರಗಳ ವಿರುದ್ಧ ಕೇಂದ್ರ ಸಚಿವೆ ಅನ್ನಪೂರ್ಣಾದೇವಿ ಗಂಭೀರ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮ ಜೋತೆ ಮಾತನಾಡಿದ ಅವರು ಮೋದಿ ಸರ್ಕಾರದ ಆಡಳಿತ ವಿರೋಧಿಸೋ ವಿಕ್ಷಗಳ ವಿರುದ್ಧ ಗರಂ, ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರಕ್ಕೆ12ವರ್ಷ ಪೂರ್ವವಾಗಿದೆ. ಮೋದಿ ಸರ್ಕಾರ ಸಾಮಾನ್ಯ ಜನರಿಗಾಗಿ ಆಡಳಿತ ನೀಡಿದು, ಯುವಕರು, ಮಹಿಳೆ, ರೈತರು, ಬಡವರನ್ನ ತೆಗೆದುಕೊಂಡು ಪ್ರಗತಿಯತ್ತ ದೇಶ ಸಾಗುತ್ತಿದೆ ಎಂದರು.

 ಆಪರೇಷನ್ ಸಿಂಧೂರ ಸೇರಿದಂತೆ ಕಾಂತ್ರಿಕಾರಿ ತೀರ್ಮಾನಗಳು ಮೋದಿ ಆಡಳಿತದಲ್ಲಿ ಆಗಿದು, ಮೋದಿ ಆಡಳಿತವನ್ನ ಹಿಟ್ಲರ್ ಶಾಹಿ ಅನ್ನೋರು ತುರ್ತು ಪರಿಸ್ಥಿತಿ ನೆನಪಿಸಿಕೊಳ್ಳಲಿ ಎಂದು ಕೇಂದ್ರ ಸಚಿವೆ ಹೇಳಿದರು

ಕೊಲ್ಕತ್ತಾದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ವಿಚಾರ ಇಂತಹ ಘಟನೆಗಳು ನಡೆಯುತ್ತಿರುವುದ ನೋವಿನ ಸಂಗತಿ. ಪಶ್ಚಿಮ ಬಂಗಾಳದಲ್ಲಿ ಇದಕ್ಕೂ ಮೊದಲು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆಗಿತ್ತು, ಪದೇ ಪದೇ ರೇಪ್ ಗಳು ಆಗ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಎಂದರು .

ಪಶ್ಚಿಮ ಬಂಗಾಳ ಸರ್ಕಾರ ಇಂತಹ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸುತ್ತಿಲ್ಲ.ಫಾಸ್ಟ್ರ್ಯಾಕ್ ಕೋರ್ಟ್ ಗಳ ರಚನೆಗೂ ಆಸಕ್ತಿಯನ್ನ ಪಶ್ಚಿಮ ಬಂಗಾಳ ಸರ್ಕಾರ ತೋರಿಸುತ್ತಿಲ್ಲ. ಇಂತಹ ಪ್ರಕರಣದಲ್ಲಿ ಸಂತ್ರಸ್ತರಿಗೆ ಆದಷ್ಟು ಬೇಗ ನ್ಯಾಯ ದೊರೆಯಬೇಕು. ಅಲ್ಲಿ ಮಹಿಳಾ‌ ಮುಖ್ಯಮಂತ್ರಿ ಇದ್ದಾರೆ

ಮಮತಾ ಬ್ಯಾನರ್ಜಿ ಸಿಎಂ ಇದ್ದಾಗಲೂ ಇಂತಹ ಘಟನೆಗಳು ಮನಸಿಗೆ ಘಾಸಿ ಆಗುತ್ತಿದೆ. ರೇಪ್ ಕೇಸ್ ಗಳನ್ನ ಪಶ್ಚಿಮ ಬಂಗಾಳ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಹೀಗಾಗಿ ಮುಂದಿನ‌ ದಿನಗಳಲ್ಲೂ ಇಂತಹ ಘಟನೆ ಮರುಕಳಿಸುವ ಸಾಧ್ಯತೆಯಿದೆ ಎಂದರು.

ಬೆಳಗಾವಿ ಸೇರಿ ಕರ್ನಾಟಕದಲ್ಲೂ ರೇಪ್ ಕೇಸ್ ಹೆಚ್ಚಳ ವಿಚಾರ  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಾಗಿ ಕೆಲಸ ಮಾಡ್ತಿದ್ದಾರೆ. ಚುನಾವಣೆ ಹೊತ್ತಿನ ಮತಗಳನ್ನ ಪಡೆಯಲು ತೋರಿಸುತ್ತಿದ್ದ ಆಸಕ್ತಿ ಈಗಿಲ್ಲ.ಬಾರಾಜ್ಯದ ಜನರ ಚಿಂತೆ ಸರ್ಕಾರಕ್ಕಿಲ್ಲಈ ಸರ್ಕಾರ ಬರೀ ತಮ್ಮ‌ವರ ಹಿತಕ್ಕಾಗಿ ಕೆಲಸ ಮಾಡ್ತಿದೆ ಇದರಿಂದ ಕಾನೂನು ಸುವ್ಯವಸ್ಥೆ ಹಾಳಾಗ್ತಿದೆ ಇದರಿಂದ ಅಪರಾಧಿಕ ಕೃತ್ಯಗಳು ಪರಿವರ್ತನೆ ಅಧಿಕಾರದಲ್ಲಿ ಇರೋರಿಗೆ ಇದರ ಬಗ್ಗೆ ಚಿಂತೆ ಇಲ್ಲ.ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇಲ್ಲ ಎಂದು ಹೇಳಿದರು

ಕಾಂಗ್ರೆಸ್ ಶಾಸಕ ಬಿ.ಆರ.ಪಾಟೀಲ್ ಹೇಳಿಕೆ ವಿಚಾರ.ಕಾಂಗ್ರೆಸ್‌ ಸರ್ಕಾರದ ಉದ್ದೇಶವೇ ಭ್ರಷ್ಟಾಚಾರ ಆಗಿದೆ.ಕಾಂಗ್ರೆಸ್ ಸರ್ಕಾರದ ಆಡಳಿತ ಇದ್ದಲ್ಲಿ  ಭ್ರಷ್ಟಾಚಾರ ಹೆಚ್ಚಾಗುತ್ತಿದೆ.ಸರ್ಕಾರ ಆಡಳಿತ ಇರೋ ಜಾರ್ಖಂಡ್ ನಲ್ಲಿ ಇಂತಹದ್ದೇ ಪರಿಸ್ಥಿತಿಯಿದೆ. ಹಣವಿಲ್ಲದೇ ಕಾಂಗ್ರೆಸ್ ಸರ್ಕಾರ ಇರೋ ರಾಜ್ಯದಲ್ಲಿ ಜನರ ಕೆಲಸಗಳು ಆಗುವುದಿಲ್ಲ ಎಂದು ಕೇಂದ್ರ ಸಚಿವೆ ಅನ್ನಪೂರ್ಣಾದೇವಿ ಆರೋಪಿಸಿದರು.

RELATED ARTICLES
- Advertisment -spot_img

Most Popular

error: Content is protected !!