ಬೆಳಗಾವಿ; ಬೆಳಗಾವಿ ಪಾಲಿಕೆ ಮೇಯರ್, ಸದಸ್ಯರೊಂಬ್ಬರ ಸದಸ್ಯತ್ವ ರದ್ದು ವಿಚಾರ ನಿರ್ಣಯ ರಾಜಕೀಯ ಪ್ರೇರಿತ, ಇದು ನೀಚ ಮಟ್ಟದ ರಾಜಕೀಯ. ಸಾಮಾನ್ಯ ಕುಟುಂಬ ವ್ಯಕ್ತಿ ಮೇಯರ್ ಆಗಿದ್ದು ಕಾಂಗ್ರೇಸ್ ಗೆ ಸಹಿಸಲು ಆಗಿಲ್ಲ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಿಂದೆ ಓಪನ್ ಕೋರ್ಟ್ ನಲ್ಲಿ ಜಡ್ಜ್ ಅವರ ಕೈಯಿಂದ ಉಗಿಸಿಕೊಂಡಿದ್ದಾರೆ. ಐಎಎಸ್ ಅಧಿಕಾರಿಗಳಿಗೆ ಸರಿಯಾಗಿ ಟ್ರೇನಿಂಗ್ ಆಗಿಲ್ಲ ಅಂತ ಅವರೇ ಉಗಿದಿದ್ದಾರೆ.
ಈ ರೀತಿಯ ರಾಜಕೀಯ ಮಾಡಬಾರದು. ಮತ್ತೆ ಹೈ ಕೋರ್ಟ್ ಗೆ ನಾವು ಅಫೀಲ್ ಮಾಡುತ್ತೆವೆ. ಅಲ್ಲು ಆಗದಿದ್ದರೆ ನಾವು ಸುಪ್ರಿಂ ಕೋರ್ಟ್ ಗೆ ಮೊರೆ ಹೋಗುತ್ತೆವೆ.ಕಾರ್ಪೋರೇಟರ್ ಇದ್ದು ಮಳಿಗೆ ಪಡೆದರೆ ಅದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರೆ ಅದು ತಪ್ಪು. ಆದರೆ ಕಾರ್ಪೋರೇಟರ್ ಆಗುವ ಮೊದಲು ಅವರು ಮಳಿಗೆ ಪಡೆದಿದ್ದಾರೆ ಎಂದರು
ತಿನಿಸು ಕಟ್ಟೆ ಜಾಗ, ಅದು ತಿಪ್ಪೆ ಗುಂಡಿಯ ಜಾಗ. ಅದನ್ನು ಡೆವಲಪ್ಮೆಂಟ್ ಮಾಡಿದ್ದು ನಾನು. ಇನ್ನೂ ಮುರು ವರ್ಷ ನಮ್ಮ ಅಧಿಕಾರ ಇದೆ. ಕಾನೂನು ರೀತಿಯಲ್ಲಿ ನಾವು ಉತ್ತರ ಕೊಡ್ತಿವಿ ಎಂದರು.
ನಾವು ಲಫಂಗತನ ಮಾಡೋದಿಲ್ಲ ಎಂದ ಅಭಯ್ ಪಾಟೀಲ್. ಜುಲೈ 2ರಂದು ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಇದೆ. ಈ ಚುನಾವಣೆಯಲ್ಲಿ ಮಂಗೇಶ್ ಪವಾರ್ ಮೇಯರ್ ಆಗಿಯೇ ಮತ ಚಲಾವಣೆ ಮಾಡ್ತಾರೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದು ಅಭಯ ಪಾಟೀಲ್ ಹೇಳಿದರು.