ಕುಡಚಿ :ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಕೃಷ್ಣಾ ನದಿ ಹಿನ್ನೀರು ಸರಬರಾಜಿಗಾಗಿ 31.20 ಮೊತ್ತದ ಕಾಮಗಾರಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು.
ಪ್ರತಿ ಬಾರಿ ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿ ನೀರು ಕಡಿಮೆಯಾದಾಗ ಕುಡಚಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತೇಯವಾಗುತಿದ್ದು, ಈ ಒಂದು ಸಮಸ್ಯೆಯನ್ನು ಸರಿದೂಗಿಸಲು ಕುಡಚಿ ಗ್ರಾಮೀಣ ಭಾಗದ ಟಿಕನಹಾಳ ತೋಟ ರಸ್ತೆಯಿಂದ ಉಗಾರ ಬ್ಯಾರೇಜ ಹಿನ್ನೀರಿನ ವರೆಗೆ 2023-24ರ 15ನೇ ಹಣಕಾಸು ಯೋಜನೆಯಡಿ 12ಇಂಚ ಪಿಎನ-8ಪಿಇ 80ಎಚಡಿಪಿ 315 ಡಯಾ ಸುಮಾರು 1064ಮೀಟರ ಉದ್ದದ ಸುಮಾರು 75ಲಕ್ಷ ಮೊತ್ತದ ಪೈಪ್ಲೈನ್ ಅಳವಡಿಸುವ ಕಾಮಗಾರಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಹಮೀದ್ದಿನ ರೋಹಿಲೆ, ಗುತ್ತಿಗೆದಾರರ ಸದಾಶಿವ ದಳವಾಯಿ, ಸಾದೀಕ ಸಜ್ಜನ, ಸಾದೀಕ ರೋಹಿಲೆ, ಮಹಿಬೂಬ ಜಾತಗಾರ, ಪಾಷಾ ಚಮನಶೇಖ, ಅಶ್ಫಾಕ ಅಲಾಲಖಾನ, ಆತೀಫ ಪಟಾಯಿತ, ರವುಫ ಚಮನಮಲಿಕ, ಮುಶ್ಪಿಕ ಜಿನಾಬಡೆ, ಜಾವೀದ ರುಕುಂದಿ, ಅಬ್ದುಖಾದ ರೋಹಿಲೆ, ರಫೀಕ ರೋಹಿಲೆ, ಐಜಾಜ ಬಿಚ್ಚು, ಮಕ್ಸುದ ಖುದಾವಂತ ಇತರರು ಉಪಸ್ಥಿತರಿದ್ದರು.