Monday, December 23, 2024
Google search engine
Homeಅಂಕಣಗ್ರಾಮೀಣ ಭಾಗದಲ್ಲಿ ಯುವ ಮಹಿಳಾ ಉದ್ಯಮಿ ನೀರು ಉದ್ಯಮದಲ್ಲಿ ಸಾಧಕಿಯಾದ ಶ್ರೀದೇವಿ ಹೊಸಪೇಟಿ (ಮಹಿಳಾ ದಿನಾಚರಣೆಯ...

ಗ್ರಾಮೀಣ ಭಾಗದಲ್ಲಿ ಯುವ ಮಹಿಳಾ ಉದ್ಯಮಿ ನೀರು ಉದ್ಯಮದಲ್ಲಿ ಸಾಧಕಿಯಾದ ಶ್ರೀದೇವಿ ಹೊಸಪೇಟಿ (ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ)

ವರದಿ : ತುಕಾರಾಮ ಮದಲೆ

ಹಾರೂಗೇರಿ : ಮಹಿಳೆ ಎಂದರೆ ಹಾಗೆ! ಛಲಬಿಡದ ಚಿರತೆಯಂತೆ, ಗುರಿ ಹೊಂದಿದ ಗುರುವಂತೆ, ಮಮತೆಯ ಮಣ್ಣಿನಂತೆ, ಧರಣಿಯ ಹಸಿರಂತೆ ಸದಾ ಉಲ್ಲಾಸದ ಹಾದಿಯಲ್ಲಿ ಹೊಸ ಹೊಸ ವಿಚಾರಗಳೊಂದಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನಡೆ ಸಾಧಿಸುವ ಹಂಬಲದಾಕೆ.

ಇಂತಹ ಅಪರೂಪದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸಿಂಚನ ಎಂಬ ನೀರಿನ ಘಟಕ ಸ್ಥಾಪನೆ ಮಾಡಿ ಹಲವಾರು ಜನರಿಗೆ ಉದ್ಯೋಗ ಕಲ್ಪಿಸಿ ತಾನೂ ಕೂಡ ಸಮಾಜದಲ್ಲಿ ಮುನ್ನಡೆಯನ್ನ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ ಶ್ರೀದೇವಿ ಬಸವರಾಜ ಹೊಸಪೇಟಿ.ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಹಾಗೂ ಲವಣಂಶಯುಕ್ತ ನೀರು ಸಿಗಲಿ ಎಂಬ ಮಹದುದ್ಧೇಶದಿಂದ 2019 ರಲ್ಲಿ ನೋಂದಣಿಯಾದ ಹಾಗೂ 2022 ರಲ್ಲಿ ಬೈಲೂರಿನ ಪೂಜ್ಯ ಶ್ರೀ ನಿಜಗುಣ ಪ್ರಭು ಸ್ವಾಮೀಜಿಗಳು ಹಾಗೂ ಶೇಗುಣಶಿಯ ಪೂಜ್ಯ ಶ್ರೀ ಮಹಾಂತ ಪ್ರಭು ಸ್ವಾಮೀಜಿಗಳ ಅದರಂತೆ ಶರಣ ಶ್ರೀ ಐ ಆರ್ ಮಠಪತಿಯವರ ಅಮೃತ ಹಸ್ತದಿಂದ ಅಧಿಕೃತವಾಗಿ ಕಾರ್ಯರಂಭಗೊಂಡ ಸಿಂಚನ ಫುಡ್ಸ್ ಅಂಡ್ ಬೆವರೇಜ್ ಪ್ರೈವೇಟ್ ಲಿಮಿಟೆಡ್, ಹಾರೂಗೇರಿಯು, ಇಂದಿಗೆ 1 ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇದೀಗ ಅಂದಾಜು 3.5 ಕೋಟಿ ರೂಪಾಯಿಯ ಬಂಡವಾಳದಿಂದ ಯಶಸ್ಸಿನ ಪಥದಲ್ಲಿರುವ ಈ ಸಂಸ್ಥೆಯು ಶ್ರೀಮತಿ ಶ್ರೀದೇವಿ ಬಸವರಾಜ ಹೊಸಪೇಟಿಯವರ ಮುಂದಾಳತ್ವದಲ್ಲಿ ಸಂಪೂರ್ಣ ಮಹಿಳಾ ಉದ್ದಿಮೆ ಘಟಕವಾಗಿ ಮುನ್ನಡೆಯನ್ನು ಸಾಧಿಸಿದೆ.

ಇದಕ್ಕೆ ಪೂರಕವಾಗಿ ಸಹಾಯ ಸಹಕಾರ ನೀಡಿದ ಮಾಜಿ ಶಾಸಕರಾದ ಪಿ ರಾಜೀವ್,ಅಥಣಿ ಶಾಸಕರಾದ ಲಕ್ಷ್ಮಣ ಸವದಿ,ಚಿದಾನಂದ ಸವದಿ ಮುಂತಾದ ಗಣ್ಯರು ಹರಸಿದ್ದಾರೆ.

*ಘಟಕದ ವಿಶೇಷತೆ :*
ಅತ್ಯಾಧುನಿಕ ಯಂತ್ರೋಪಕರಣಗಳಿಂದ ಹಾಗೂ ಮುಂದುವರೆದ ತಂತ್ರಜ್ಞಾನದಿಂದ ನೀರನ್ನು ಶುದ್ಧೀಕರಣ ಗೊಳಿಸಿ ಸ್ವಯಂಚಾಲಿತ ಯಂತ್ರಗಳಿಂದ ಲವಣಾಂಶಗಳನ್ನು ಸೇರಿಸಿ, ಸಂಸ್ಕರಿಸಿ ಪರಿಶುದ್ಧವಾದ ನೀರನ್ನು 200ಎಂ ಎಲ್ ,500ಎಂ ಎಲ್ ,1 ಲೀಟರ್ ಹಾಗೂ 2,20 ಲೀಟರ್ ಬಾಟಲ್ ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಇನ್ನೊಂದು ವಿಶೇಷವೆಂದರೆ ಅಲ್ಕಾಲೈನ್ ವಾಟರ್ ತಯಾರಿಸುವ ಉತ್ತರಕರ್ನಾಟಕದ ಏಕೈಕ ನೀರಿನ ಘಟಕವೆಂದರೆ ಸಿಂಚನ ಎಂಬ ಪ್ರತೀತಿಯೂ ಇದಕ್ಕಿದೆ. ವಿ ಐ ಪಿ ಜನರು, ನಟ ನಟಿಯರು, ಕ್ರಿಕೆಟ್ ತಾರೆಗಳು ಬಳಸುವ ಈ ಅಲಕಲೈನ ನೀರಿನ ತಯಾರಿಕಾ ಘಟಕ ಬೆಂಗಳೂರು ಬಿಟ್ಟರೆ ಇದೇ ಹಾರೂಗೇರಿಯಲ್ಲಿ ಮಾತ್ರವಿರುವಿದು ವಿಶೇಷ.

*ದುಡಿಯುವ ಸಿಬ್ಬಂದಿ :*
ಈ ಸಿಂಚನ ನೀರಿನ ಘಟಕದಲ್ಲಿ 20 ಕ್ಕೂ ಅಧಿಕ ಸಿಬ್ಬಂದಿ ಇದ್ದು, 50% ರಷ್ಟು ಮಹಿಳಾ ಮಣಿಗಳೇ ಕಾರ್ಯ ನಿರ್ವಹಿಸುತ್ತಾರೆ. ಇದಕ್ಕೆ ಪೂರಕ ಸಾರಥಿಯಾಗಿ ಶ್ರೀದೇವಿ ಹೊಸಪೇಟಿಯವರು ಮುನ್ನಡೆಯ ಹೆಜ್ಜೆ ಹಾಕುತ್ತಿದ್ದಾರೆ.ಸಣ್ಣ ಕೈಗಾರಿಕೆಯ ಮುಂಧೆಜ್ಜೆಯ ಪ್ರತೀಕವಾಗಿದೆ.

ಸಂಸ್ಥಾಪಕರು :
ಮೂಲತ: ವೈದ್ಯರಾದ ಡಾ.ಬಸವರಾಜ ಎಂ ಹೊಸಪೇಟಿಯವರು ಇದನ್ನು ಹುಟ್ಟು ಹಾಕಿದ್ದಾರೆ.ಹಿರಿಯ ನಿರ್ದೇಶಕರಾಗಿ ಶ್ರೀಮತಿ ಅಕ್ಕಾತಾಯಿ ಎಂ ಹೊಸಪೇಟಿಯವರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀಮತಿ ಶ್ರೀದೇವಿ ಬಸವರಾಜ ಹೊಸಪೇಟಿಯವರಿದ್ದಾರೆ. ಸೋಮೇಶ್ವರ ಮಠಪತಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಜಾಣ ನಡೆಯ ವ್ಯವಹಾರಿಕ ವ್ಯವಹಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಇದೀಗ ಎಲ್ಲೆಡೆ ಅಂದರೆ 3 ರಾಜ್ಯಗಳಲ್ಲಿ ಸಿಂಚನ ತನ್ನ ನೀರಿನ್ನು ರುಚಿಸಿದೆ.

ವಿಸ್ತಾರ :
ಕಳೆದ ಒಂದೇ ವರ್ಷದಲ್ಲಿ ಈ ಸಿಂಚನ ನೀರಿನ ಘಟಕ 3 ರಾಜ್ಯಗಳ 8 ಜಿಲ್ಲೆಗಳಲ್ಲಿ ತನ್ನ ವಿತರಣಾ ವ್ಯಾಪ್ತಿಯನ್ನು ಹಬ್ಬಿಸಿದೆ.ಅಲ್ಲದೆ ಪ್ರತಿದಿನ ಸುಮಾರು 50 ಸಾವಿರ ಲೀಟರ್ ನೀರನ್ನು ಶುದ್ಧಿಕರಿಸಿ ಮಾರಾಟ ಮಾಡುವ ಕಂಪನಿಯಾಗಿ ಮುನ್ನಡೆದಿದೆ.

 

RELATED ARTICLES
- Advertisment -spot_img

Most Popular

error: Content is protected !!