Tuesday, December 24, 2024
Google search engine
Homeಸುದ್ದಿಕಮಲ ಪಡೆ ಲೋಕಸಮರಕ್ಕೆ ಭರ್ಜರಿ ತಾಲೀಮು:  ಬಿಜೆಪಿಗೆ 10 ಕ್ಷೇತ್ರಗಳದ್ದೇ ತಲೆನೋವು

ಕಮಲ ಪಡೆ ಲೋಕಸಮರಕ್ಕೆ ಭರ್ಜರಿ ತಾಲೀಮು:  ಬಿಜೆಪಿಗೆ 10 ಕ್ಷೇತ್ರಗಳದ್ದೇ ತಲೆನೋವು

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ 10 ಕ್ಷೇತ್ರಗಳಲ್ಲಿ ಆಂತರಿಕ ಸಂಘರ್ಷ ಜೋರಾಗಿದೆ. ನಾಯಕ-ನಾಯಕರ ಮಧ್ಯೆ, ಆಕಾಂಕ್ಷಿ-ಆಕಾಂಕ್ಷಿಗಳ ಮಧ್ಯೆ, ಸಂಸದ-ಶಾಸಕರ ಮಧ್ಯೆ, ಸಂಸದ-ಕಾರ್ಯಕರ್ತರ ನಡುವೆ ಸಂಘರ್ಷ ಜೋರಾಗುತ್ತಿದೆ.

ಹತ್ತು ಕ್ಷೇತ್ರಗಳಲ್ಲಿ ಸಂಘರ್ಷಕ್ಕೆ ತೆರೆ ಎಳೆಯುವಲ್ಲಿ ರಾಜ್ಯ ನಾಯಕರು ಫೇಲ್ ಆದರಾ ಎಂಬ ಚರ್ಚೆ ಎದ್ದಿದೆ. ಆ 10 ಜಿಲ್ಲೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ಸಂಧಾನ ಸಭೆ ನಡೆಸಿದರೂ ನಾಯಕರ ಕಿತ್ತಾಟಕ್ಕೆ ಬ್ರೇಕ್ ಬಿದ್ದಿಲ್ಲ.
ಈ ನಡುವೆ ಬಿಜೆಪಿಯ ಬಣ ಕಚ್ಚಾಟದ ಲಾಭ ಪಡೆಯಲು ಕಾಂಗ್ರೆಸ್  ಹವಣಿಸುತ್ತಿದೆ. ಹೀಗಾಗಿ ಬಿಜೆಪಿ ಕಚ್ಚಾಟ ಶಮನಕ್ಕೆ ವಿಜಯೇಂದ್ರ ಹೈಕಮಾಂಡ್ ಮೊರೆ ಹೋಗಿದ್ದಾರೆ. ಮುಂದಿನ ವಾರ ಲೋಕ ಕ್ಷೇತ್ರಗಳ ಕ್ಲಸ್ಟರ್ ಸಭೆ ನಡೆಯಲಿದೆ. ಈ ವೇಳೆ ಕಿತ್ತಾಡಿಕೊಳ್ತಿರುವ ಮುಖಂಡರಿಗೆ ಖಡಕ್ ವಾರ್ನಿಂಗ್ ರವಾನಿಸಲು ಹೈಕಮಾಂಡ್ ಮುಂದಾಗಲಿದೆ ಎನ್ನಲಾಗಿದೆ

RELATED ARTICLES
- Advertisment -spot_img

Most Popular

error: Content is protected !!