ಬೆಳಗಾವಿ :- ಬೆಳಗಾವಿ ಕಾಕತಿ ಮೇಲೆ ಇರುವ ಗುಡ್ಡಗಾಡು ಪ್ರದೇಶವಾದ ಸೋನಟ್ಟಿಯಲ್ಲಿ ಅಕ್ರಮ ಕಳ್ಳ ಬಟ್ಟಿ ತಾಯಾರಿಕಾ ಪ್ರದೇಶದ ಮೇಲೆ ಇಂದು ಬೆಳಿಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಪಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಅವರು ಸುಮಾರು 200 ಅಧಿಕ ಪೋಲಿಸರ ಮೂರು-ನಾಲ್ಕು ತಂಡಗಳನ್ನು ರಚಿಸಿಕೊಂಡು ಕಳ್ಳ ಬಟ್ಟಿ ಸಾರಾಯಿ ತಯಾರಿಕಾ ಪ್ರದೇಶಗಳ ಮೇಲೆ ದಾಳಿ ಮಾಡಿದ್ದಾರೆ.
ಬೆಳಗಾವಿ ನಗರ ಪೋಲೀಸ್ ಅಯುಕ್ತ ಎಸ್. ಎನ್.ಸಿದ್ದರಾಮಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ದಾಳಿ ನಡೆಸಿದ ಸಂದರ್ಭದಲ್ಲಿ ಸಂಗ್ರಹಿಸಿದ ಒಟ್ಟು 5,700 ಲೀಟರ್ ಕಳ್ಳ ಬಟ್ಟಿ ಸಾರಾಯಿ ವಶ ಪಡಿಸಿಕೊಂಡಿದ್ದಾರೆ. ಗ್ರಾಮದ ಮೆನೆಗಳನ್ನು ಸಹ ಪರಿಶೀಲಿಸಿದಾಗ ಮನೆಯಲ್ಲಿ ಕೂಡಾ ತಾಯಾರಿಸಿರುವ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು.
ದಾಳಿ ನಡೆಸಿದ ವೇಳೆ ಪೋಲಿಸರು ಬಂದಿರುವುದನ್ನು ನೋಡಿ ಎಲ್ಲರೂ ಓಡಿ ಹೋಗಿದ್ದಾರೆ. ಆದರೆ ಪೋಲಿಸರು ಒಬ್ಬ ವ್ಯಕ್ತಿ ಮಾತ್ರ ಸೇರೆ ಸಿಕ್ಕಿದ್ದಾನೆ. ಆರೋಪಗಳನ್ನು ಬಂದಿಸಿ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದರು.