ಬೆಳಗಾವಿ: ಲಕ್ಷಾಂತರ ಮೌಲ್ಯದ ಕಳ್ಳಬಟ್ಟಿ ಸಾರಾಯಿಯನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಗುಡ್ಡಗಾಡಿನ ಸೋನಟ್ಟಿ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ವಶಕ್ಕೆ ಪೆಡದು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂಳಿದ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಡಿಸಿಪಿ ನೇತೃತ್ವದಲ್ಲಿ ಸುಮಾರು 200 ಪೊಲೀಸ್ ಸಿಬ್ಬಂದಿಗಳಿಂದ 700 ಲೀಟರ್ 26 ಬ್ಯಾರೇಲ್ ಕಳ್ಳಬಟ್ಟಿ ಹಾಗೂ 30 ಲೀಟರಿನ 17 ಬ್ಯಾರೇಲ್ ಸಾರಾಯಿಯನ್ನು ವಶಪಡಿಕೊಂಡಿದ್ದಾರೆ.