Thursday, October 16, 2025
Google search engine
Homeರಾಜ್ಯಧರ್ಮಸ್ಥಳದಲ್ಲಿ ಶವಗಳ ಪತ್ತೆ ಕಾರ್ಯ ತನಿಖೆಯಲ್ಲಿ ಎಲ್ಲಾ ಸತ್ಯ ಹೊರಬರಬೇಕು: ಜಗದೀಶ ಶೆಟ್ಟರ್
spot_img

ಧರ್ಮಸ್ಥಳದಲ್ಲಿ ಶವಗಳ ಪತ್ತೆ ಕಾರ್ಯ ತನಿಖೆಯಲ್ಲಿ ಎಲ್ಲಾ ಸತ್ಯ ಹೊರಬರಬೇಕು: ಜಗದೀಶ ಶೆಟ್ಟರ್

ಬೆಳಗಾವಿ:  ಧರ್ಮಸ್ಥಳದಲ್ಲಿ ಮೃತರ ಅವಶೇಷ ಹೊರೆ ತೆಗೆಯುವ ಕಾರ್ಯದ ಕುರಿತು ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಸ್ ಐ ಟಿ ತನಿಖೆ ನಡೆಯುತ್ತಿದೆ ಅನಾಮಿಕ ಹೇಳಿಕೆ ಮೇಲೆ ಅಸ್ಥಿಪಂಜರ ಹೊರ ತೆಗೆಯುತ್ತಿದ್ದಾರೆ ಈಗ ತನಿಖೆ  ನಡೆಯುತ್ತಿದೆ ಮೃತರು ಯಾರು ಹೇಗೆ ಮೃತಪಟ್ಟರು ಎನ್ನುವುದು ಗೊತ್ತಾಗಬೇಕು ನಿಷ್ಪಕ್ಷಪಾತವಾಗಿ ತನಿಖೆ ಆಗಿ, ಕ್ರಮ ಕೈಗೊಳ್ಳಲಿ. ಈ ವೇಳೆಯಲ್ಲಿ ಯಾವುದೇ ಧರ್ಮ ಪೀಠಗಳ ಅಪಪ್ರಚಾರ ಆಗಬಾರದು ನೂರಾರು ಶವಗಳನ್ನು ಹುತ್ತಿದ್ದೇನೆ ಎಂದು ಅನಾಮಿಕ ಹೇಳಿದ್ದಾನೆ.

ಈ ಬಗ್ಗೆ ಡಿ ಎನ್ ಎ ಪರೀಕ್ಷೆ ‌ಸಹ ಆಗಲಿ ಅನಾಮಿಕ ವ್ಯಕ್ತಿಯೇ ಈ‌ ಬಗ್ಗೆ ‌ಹೇಳಬೇಕು.ತನಿಖೆಯ ಎಲ್ಲಾ ಸತ್ಯಾಸತ್ಯಗಳು ಹೊರ ಬರಬೇಕು ಎಂದು ಮಾಧ್ಯಮಗಳಿಗೆ ಜಗದೀಶ ಶೆಟ್ಟರ್ ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!