Thursday, October 16, 2025
Google search engine
Homeಜಿಲ್ಲಾಕೀಟನಾಶಕ ನೀರು ಸೇವಿಸಿ 12 ಮಕ್ಕಳ ಆರೋಗ್ಯದಲ್ಲಿ ಏರುಪೇರು
spot_img

ಕೀಟನಾಶಕ ನೀರು ಸೇವಿಸಿ 12 ಮಕ್ಕಳ ಆರೋಗ್ಯದಲ್ಲಿ ಏರುಪೇರು

ಬೆಳಗಾವಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇರುವ ಟ್ಯಾಂಕಿನ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡಿದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಪರಿಚಿತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕೀಟನಾಶಕ ಬೆರೆಸಿರುವುದು ದೃಢವಾಗಿದೆ.

ರಾತ್ರಿ 8 ಗಂಟೆ ಇಂದ ಸೋಮವಾರ ಮುಂಜಾನೆ 6 ಗಂಟೆಯ ಅವಧಿ ಒಳಗೆ  ಟ್ಯಾಂಕಿನಲ್ಲಿ  ಕೀಟನಾಶಕ ಬೆರಸಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಟ್ಯಾಂಕ್ ನಲ್ಲಿ ಹೆಚ್ಚಿನ ಪ್ರಮಾದಲ್ಲಿ ನೀರು ಇದ್ದುದರಿಂದ ವಿಷದ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ನೀರು ಕುಡಿದ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ತಕ್ಷಣವೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಶಾಲೆಗೆ ಆಗಮಿಸಿ ಸೂಕ್ತ ಮುನ್ನಚ್ಚರಿಕೆ ಕ್ರಮ ವಹಿಸಿದ್ದಾರೆ. ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳ ಪಡಿಸಲಾಗಿದೆ.

RELATED ARTICLES
- Advertisment -spot_img

Most Popular

error: Content is protected !!