ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಶೂನ್ಯ ಸಂಪಾದನಾ ಮಠದಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಡವಿಸಿದ್ಧರಾಮ ಸ್ವಾಮೀಜಿ ವಿರುದ್ಧ ಕೇಳಿ ಬಂದಿದ್ದ ಆರೋಪಗಳೆಲ್ಲವೂ ಸುಳ್ಳು,ಮರಳಿ ಶಿವಾಪುರ ಗ್ರಾಮದ ಅಡವಿ ಮಠಕ್ಕೆ ಸ್ವಾಮೀಜಿ ಮರಳಲಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು
ಶಿವಾಪುರ ಗ್ರಾಮದ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಬಂದಿವೆ. ಅಡವಿಸಿದ್ದೇಶ್ವರ ಮಠದ ಸ್ವಾಮೀಜಿ ಬಗ್ಗೆಯೂ ಆಪಾದನೆಗಳು ಬಂದಿವೆ ಈ ಎಲ್ಲ ಸ್ವಾಮೀಜಿಗಳು ಹಾಗೂ ಶಿವಾಪುರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಭೆ ಮಾಡಿದ್ದೇವೆ ಎಂದರು.
ಮಠದಲ್ಲಿ ನಡೆದ ಘಟನೆ ಬಗ್ಗೆ ವರದಿ ನೀಡಲು ಪೊಲೀಸರಿಗೆ ಸೂಚನೆ ನೀಡಿದ್ದೆವೆ, ಪೊಲೀಸರು ನೀಡಿದ ವರದಿ ಆಧರಿಸಿ ಸ್ವಾಮೀಜಿಗಳ ಸಮ್ಮುಖದಲ್ಲಿ ಚರ್ಚಿಸಿದ್ದೇವೆ.ಸ್ವಾಮೀಜಿ ವಿರುದ್ಧ ಕೇಳಿ ಬಂದ ಆರೋಪಗಳೆಲ್ಲವೂ ಸುಳ್ಳು ಎಂಬುದು ದೃಢವಾಗಿದೆ ಎಂದು ಹೇಳಿದರು.
ಈ ಎಲ್ಲ ಘಟನೆಯಿಂದ ಬೆಳಗಾವಿಯ ಎಲ್ಲ ಪೂಜ್ಯರ ಮನಸ್ಸಿಗೆ ನೋವಾಗಿದೆ. ಶಿವಾಪುರದ ಅಡವಿಸಿದ್ಧರಾಮ ಸ್ವಾಮೀಜಿ ಕೂಡ ಸಾಕಷ್ಟು ನೊಂದಿದ್ದರು.ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಸ್ವಾಮೀಜಿಗಳಿಗೆ ಕೆಟ್ಟ ಹೆಸರು ಬಂದಿದ್ದು, ನಮ್ಮ ಶಿವಾಪುರ ಶ್ರೀಗಳು ಈಗ ಆಪಾದನೆಯಿಂದ ಹೊರ ಬಂದಿದ್ದಾರೆ ಇದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ಮಠದ ಸುತ್ತಲೂ ಕುಡಿದು ಯಾರಾದರೂ ಗಲಾಟೆ ಮಾಡಿದರೆ ಕ್ರಮ ವಹಿಸಲು ಸೂಚಿಸಿದ್ದೇವೆ. ಅಂದು ಮಠದಲದಲ್ಲಿ ದೊಡ್ಡ ಶೋ ನಡೆದಿತ್ತು, ಈಗ ಎಲ್ಲವೂ ಶಾಂತವಾಗಿದೆ ಪೂಜ್ಯರ ಮೇಲೆ ಇಲ್ಲ ಸಲ್ಲದ ಆರೋಪ ಬೇಡ. ಸ್ವಾಮೀಜಿಗಳು, ಶಿವಾಪೂರ ಗ್ರಾಮಸ್ಥರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.