Thursday, October 16, 2025
Google search engine
Homeಜಿಲ್ಲಾಜೂನ್‌ 30ಕ್ಕೆ ವಾಕರಸಾ ಸಂಸ್ಥೆಯ ಕುಂದು ಕೊರತೆ, ಪರಿಶೀಲನಾ ಸಭೆ
spot_img

ಜೂನ್‌ 30ಕ್ಕೆ ವಾಕರಸಾ ಸಂಸ್ಥೆಯ ಕುಂದು ಕೊರತೆ, ಪರಿಶೀಲನಾ ಸಭೆ

ಬೆಳಗಾವಿ: ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜೂನ್‌ 30ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿ ನಿಗಮ. ವಲಯ ಕಚೇರಿ ಸಭಾಂಗಣದಲ್ಲಿ ವಾಕರಸಾ ಸಂಸ್ಥೆಯ ಘಟಕ & ವಿಭಾಗಗಳ ಕುಂದು ಕೊರತೆ, ಪರಿಶೀಲನಾ ಸಭೆ ನಡೆಯಲಿದೆ.

ವಾಕರಸಾ ಸಂಸ್ಥೆಯ ಬೆಳಗಾವಿ ಬೆಳಗಾವಿ/ಚಿಕ್ಕೋಡಿ ವಿಭಾಗದ ಎಲ್ಲಾ ಘಟಕ ವ್ಯವಸ್ಥಾಪರು, ವಿಭಾಗೀಯ ಸಾರಿಗೆ ಅಧಿಕಾರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಧಾರವಾಡ ವಿಭಾಗದ ಸವದತ್ತಿ & ರಾಮದುರ್ಗ ಘಟಕ ವ್ಯವಸ್ಥಾಪಕರು ಹಾಗೂ ವಿಭಾಗೀಯ ಸಂಚಾರ ಅಧಿಕಾರಿ, ವಿಭಾಗೀಯ ನಿಯಂತ್ರಣಾಧಿಕಾರಿ ಅವರೊಂದಿಗೆ ಕುಂದು ಕೊರತೆ, ಪರಿಶೀಲನಾ ಸಭೆ ನಡೆಯಲಿದ್ದು, ಸದರಿ ಸಭೆಗೆ ಹಾಜರಾಗುವಂತೆ ವಾಕರಸಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES
- Advertisment -spot_img

Most Popular

error: Content is protected !!