ಬೆಳಗಾವಿ: ಕಾಂಗ್ರೆಸ್ ನ ಮೂವರು ಶಾಸಕರ ಮೇಲೆ ಇಡಿ ದಾಳಿ ವಿಚಾರಕ್ಕೆ ಕುರಿತು ಬೆಳಗಾವಿಯಲ್ಲಿಂದು ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಹಗರಣಗಳನ್ನ ಮುಚ್ಚಿಹಾಕುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.
ಇಂದು ಮಾದ್ಯಮ ಜೋತೆ ಮಾತನಾಡಿದ ಅವರು ಪ್ರಕರಣದಲ್ಲಿ ವಾಲ್ಮೀಕಿ ನಿಗಮದ ಅಧ್ಯಕ್ಷರು, ಸಚಿವ ನಾಗೇಂದ್ರ ಅವರನ್ನ ಬಂಧನ ಮಾಡಿ, ಬಳಿಕ ಬೆಲ್ ಮೇಲೆ ನಾಗೇಂದ್ರ ಹೊರಗಡೆ ಬಂದ್ರೂ, ತನಿಖೆ ನಡೆಯುತ್ತಿದೆ ಇಂತಹವರನ್ನ ಮಂತ್ರಿ ಮಾಡುತ್ತೇನೆ ಅಂತಾ ಓಪನ್ ಆಗಿ ಸಿದ್ದರಾಮಯ್ಯ ಹೇಳಿಕೆ ನೋಡಿದರೆ ಹಗರಣಗಳ ಮುಚ್ಚಿ ಹಾಕೋ ಪ್ರಯತ್ನ ಆಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ವಾಲ್ಮೀಕಿ ಹಗರಣದಲ್ಲಿ ಓಪನ್ ಆಗಿ ಬೇರೆ ಬೇರೆ ಅಕೌಂಟ್ ಗಳಿಗೆ ಹಣ ವರ್ಗಾವಣೆ ಆಗಿದೆ. ಹಿಂದೆ ತಮಿಳುನಾಡಿನಲ್ಲಿ ಬಾಲಜೀ ಎಂಬುವವರಿಗೆ ಬೆಲ್ ಕೊಟ್ರು, ಮಂತ್ರಿ ಮಾಡಿದ್ರು ಹಾಗೆ ಇವತ್ತಿನ ಪರಿಸ್ಥಿತಿ ಇದೆ. ಇಡಿ ಅಧಿಕಾರಿಗಳು ಮಾಹಿತಿ ಆಧಾರದ ಮೇಲೆ ಎಂಟ್ರಿ ಆಗಿದ್ದಾರೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದರು.
ಲೋಕಸಭಾ ಚುನಾವಣಾ ಹಣದ ವ್ಯವಹಾರ ದುರಪಯೋಗದ ಬಗ್ಗೆ ತನಿಖೆ ಆಗುತ್ತಿದೆ. ಪ್ರಾಥಮಿಕವಾಗಿ ವಾಲ್ಮೀಕಿ ಹಗರಣಗಳ ನಡೆದಿರೋ ಬಗ್ಗೆ ಫ್ರೂವ್ ಆಗಿದೆ.ಫ್ರೂ ಆಗಿರೋದನ್ನ ಸಿದ್ದರಾಮಯ್ಯ ಸರ್ಕಾರ ಮುಚ್ಚಿಹಾಕೋಕೆ ಪ್ರಯತ್ನ ಮಾಡ್ತಿದೆ ಎಂದು ಶೆಟ್ಟರ್ ಹೇಳಿದರು.