ಬೆಳಗಾವಿ: ” ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ ಆಗುತ್ತದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಕ್ರೀಡಾಕೂಟಗಳು ಸಹಕಾರಿಯಾಗಿದೆ. ಯುವಕರು ಅನೂನ್ಯತೆಯಿಂದ ಆಟ ಆಡುವುದರೊಂದಿಗೆ ಉತ್ತಮ ಪ್ರದರ್ಶನ ನೀಡಬೇಕು” ಎಂದು ಹಿಂಡಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಮಯೂರ ಕೃಷ್ಣ ಅವರು ಹೇಳಿದರು.
ನಗರದ ಹಿಂಡಲ್ಕೊ ಇಂಡಸ್ಟ್ರೀಸ್ ಲಿ. ಆವರಣದಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಸೋಮವಾರ ಸಂಜೆ ಆಯೋಜಿಸಿಲಾದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಗೆಲ್ಲಲೇಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಭಾಗವಹಿಸುವುದೇ ಮುಖ್ಯ ಎಂದರು. ದತ್ತು ಗ್ರಾಮಗಳ ಅಭಿವೃದ್ಧಿ, ಯುವಕರ ಏಳಿಗೆಗಾಗಿ ಕಳೆದ 20 ವರ್ಷಗಳಿಂದ ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ಶ್ರಮಿಸುತ್ತಿದೆ. ಏಳು ಗ್ರಾಮದ ಯುವಕರು ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎನ್ನುತ್ತ, ಶುಭಹಾರೈಸಿದರು.
ಬಹಳಷ್ಟು ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ. ಹೀಗಾಗಿ ಕ್ರಿಕೆಟ್ , ವಾಲಿಬಾಲ್ ಜತೆಗೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿಬೇಕಿದೆ. ಪ್ರತಿ ವರ್ಷವೂ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಲಾಗುವುದು. ಕ್ರೀಡೆಗಳಿಗೆ ಅಗತ್ಯ ಸಹಾಯ-ಸಹಕಾರ ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ನೀಡಲಿದೆ ಎಂದು ಹೇಳಿದರು.
ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ಯ ಬೆಳಗಾವಿ ತಾಲೂಕಿನ 7 ದತ್ತು ಗ್ರಾಮಗಳಾದ ಬಸವನ ಕೊಳ್ಳ, ಮುತ್ತೆನಟ್ಟಿ , ಯಮನಾಪೂರ, ಕಾಕತಿ, ಗೌಂಡವಾಡ, ಕಣಬರ್ಗಿ, ಬಿ.ಕೆ ಕಂಗ್ರಾಳಿ ಗ್ರಾಮದ ಕ್ರೀಡಾಪಟುಗಳನ್ನು ಆಯ್ದುಕೊಂಡು. ಐದು ದಿನಗಳ ವರೆಗೂ ವಾಲಿಬಾಲ್ ಪಂದ್ಯಾವಳಿಗಳು ಆಯೋಜನೆ ಮಾಡಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಜತೆಗೆ ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಬಸಪ್ಪಾ ಚಿಕ್ಕಲ್ಲದಿನ್ನಿ , ಮಹೇಶ ಶೆಟ್ಟಿ, ವಿಜಯಶೇಖರ, ಬಾವೇಶ , ದಿನೇಶ ನಾಯ್ಕ, ಹರ್ಷದಾ ದೇವಳೆ, ಅನೀಲಕುಮಾರ ಚವ್ಹಾನ, ಜಾನ್, ಶಂಕ, ರಾಜು, ದಿನೇಶ ನಾಯ್ಕ ಸ್ವಾಗತಿಸಿದರು, ರಾಜು ಮಾನೆನಿರೂಪಿಸಿದರು, ಶ್ರೀಧರ ಚಿಕ್ಕಮಠ ವಂದಿಸಿದರು. ಏಳು ಗ್ರಾಮದ ಗಣ್ಯರು ಹಾಗೂ ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ಯ ಸಿಬ್ಬಂದಿ ಇತರರು ಇದ್ದರು.