Thursday, October 16, 2025
Google search engine
Homeರಾಷ್ಟ್ರೀಯಗುಪ್ತಚರ ಮಾಹಿತಿ ಮೇರೆಗೆ ಉಗ್ರರ 9 ಅಡಗುತಾಣ ಧ್ವಂಸ ಗೊಳಿಸಲಾಗಿವೆ: ಕರ್ನಲ್​ ಸೋಫಿಯಾ ಖುರೇಷಿ ಮಾಹಿತಿ
spot_img

ಗುಪ್ತಚರ ಮಾಹಿತಿ ಮೇರೆಗೆ ಉಗ್ರರ 9 ಅಡಗುತಾಣ ಧ್ವಂಸ ಗೊಳಿಸಲಾಗಿವೆ: ಕರ್ನಲ್​ ಸೋಫಿಯಾ ಖುರೇಷಿ ಮಾಹಿತಿ

ನವದೆಹಲಿ: ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆಯು ದಾಳಿ ​ನಡೆಸಿದೆ. ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಕರ್ನಲ್ ಸೋಫಿಯಾ ಖುರೇಷಿ ಅವರು ಕಾರ್ಯಾಚರಣೆ ಬಗ್ಗೆ ಮಾಹಿತಿ ಹಂಚಿಕೊಂಡರು.

ಈ ಕುರಿತು ಬುಧವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಸ್ತ್ರಿ, ಕರ್ನಲ್​ ಸೋಫಿಯಾ ಖುರೇಶಿ ಮತ್ತು ವಿಂಗ್​ ಕಮಾಂಡರ್​ ವ್ಯುಮಿಕ ಸಿಂಗ್​ ಅವರು ಜಂಟಿ ಸುದ್ದಿಗೋಷ್ಟಿ ನಡೆಸಿದರು.

ಪಹಲ್ಗಾಮ್​ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಮಿಲಿಟರಿ ಆಪರೇಷನ್​ ಸಿಂಧೂರ​ ಹೆಸರಿನಲ್ಲಿ 9 ಉಗ್ರರ ತಾಣ ಮತ್ತು ತರಬೇತಿ ಸೌಲಭ್ಯ ಶಿಬಿರದ ಮೇಲೆ ದಾಳಿ ನಡೆಸಿದೆ. ಗಡಿಯಾಚೆಗಿನ ಭಯೋತ್ಪಾದನೆಯ ನೇರ ಸಂಪರ್ಕದ ಸಂಬಂಧ ಕುರಿತು ನಿಖರ ಗುಪ್ತಚರ ಮಾಹಿತಿ ಆಧಾರದ ಮೇಲೆ ಎಚ್ಚರಿಕೆಯಿಂದ ಈ ದಾಳಿ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದಕ ದಾಳಿ ರೂಪಿಸಿ, ನಡೆಸಿದ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗಿದೆ. ಲಾಹೋರ್‌ನಿಂದ ಸುಮಾರು 40 ಕಿಲೋಮೀಟರ್ ಉತ್ತರದಲ್ಲಿರುವ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ತರಬೇತಿ ನೆಲೆಯೂ ಸೇರಿದಂತೆ ಇತರೆಡೆ ಆಪರೇಷನ್​ ನಡೆದಿದೆ. 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯ ರೂವಾರಿಗಳಾದ ಅಜ್ಮಲ್​ ಕಸಬ್​​ ಮತ್ತು ಡೇವಿಡ್​​ ಹೆಡ್ಲಿ ಇಲ್ಲಿಂದಲೇ ತರಬೇತಿ ಪಡೆದಿದ್ದರು ಎಂದು ಮಾಹಿತಿ ನೀಡಿದರು.

ಪಹಲ್ಗಾಮ್​ನಂತಹ ಗಡಿಯಾಚೆಗಿನ ದಾಳಿಗಳಿಗೆ ಭಾರತವು ತಕ್ಕ ಉತ್ತರ ನೀಡಿದೆ ಎಂದು ಸರ್ಕಾರ ತಿಳಿಸಿದೆ. ಭಾರತ ಭಯೋತ್ಪಾದಕರ ನೆಲೆಗಳನ್ನು ಕೆಡವಲು ಮತ್ತು ನಿಷ್ಕ್ರಿಯಗೊಳಿಸುವುದರ ಮೇಲೆ ಈ ದಾಳಿಯು ಕೇಂದ್ರೀಕರಿಸಿದೆ ಎಂದರು.

ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಪ್ರದೇಶದಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿರುವ ಜೈಶ್​ ಎ ಮೊಹಮ್ಮದ್​​ ಭದ್ರಕೋಟೆಯಾದ ಬಹವಾಲ್ಪುರ್ ಹಾಗೂ ಲಷ್ಕರ್​ ಎ ತೋಯ್ಬಾದ ಮುರಿಡ್ಕೆ ನೆಲೆಗಳು ಸೇರಿದಂತೆ 9 ಉಗ್ರರ ಅಡುಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

RELATED ARTICLES
- Advertisment -spot_img

Most Popular

error: Content is protected !!