ಬೆಳಗಾವಿ : ಗ್ರಾಮ ಪಂಚಾಯಿತಿವಾರು ಕ್ರೀಯಾ ಶೀಲ ಕೂಲಿ ಕಾರ್ಮಿಕರ ಅನುಣವಾಗಿ ಮುಂಜಾಗೃತವಾಗಿ ಕಾಮಗಾರಿ ಸ್ಥಳಗಳನ್ನು ಗುರುತಿಸಿ ನಿರಂತರ ಕೆಲಸ ನೀಡಬೇಕು ಎಂದು ಸಹಾಯಕ ನಿರ್ದೇಶಕರು (ಗ್ರಾಉ), ಬಿ.ಡಿ ಕಡೇಮನಿ ಅವರು ಹೇಳಿದರು.
ತಾಲ್ಲೂಕಿನ ಕಡೋಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲಾ ಹೂಳ ಎತ್ತುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಏಪ್ರಿಲ್ 29 ರಂದು ನರೇಗಾ ಕೂಲಿಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಕುಡಿಯುವ ನೀರಿನ ಬಾಟಲ್ ಹಾಗೂ ಕ್ಯಾಪ ನೀಡಿ ಅವರು ಮಾತನಾಡಿದರು.
ವಿಶೇಷ ಚೇತನರ ನೋಂದಣಿ ಅಭಿಯಾನ ಮುಕ್ತಾಯ ವಾಗಿದ್ದು, ವಿಶೇಷ ಚೇತನರಿಗೆ ನಿರಂತರ ಕೆಲಸ ನೀಡಿ ಗ್ರಾಮ ಪಂಚಾಯತಿವಾರು ವಿಶೇಷ ಚೇತನರ ಭಾಗವಹಿಸುಕೆ ಹೆಚ್ಚಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚ್ಚಿ, ಎಮ್.ಐ.ಎಸ್. ಶ್ರೀ ಶೀಥಲ್ ಪಾಟೀಲ, ತಾಐಇಸಿ ಸಂಯೋಜಕ ರಮೇಶ ಮಾದರ, ತಾಂತ್ರಿಕ ಸಹಾಯ ಬಸವರಾಜ ಕಾಮಣ್ಣವರ, ಸುನೀಲ್ ಪಂಚೋದಿ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.