ಬೆಳಗಾವಿ: ಪಹಲ್ಲಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ಖಂಡಿಸಿ ವಿಎಚ್‌ಪಿ ಹಾಗೂ ಭಜರಂಗದಳದ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಗಿದೆ.
ಬೆಳಗಾವಿಯ ಶಿವಾಜಿ ಉದ್ಯಾನವನದಿಂದ ಶಹಾಪುರವರೆಗೆ ವಿಎಚ್‌ಪಿ ಹಾಗೂ ಭಜರಗಂಗದಳ ನೂರಾರು ಕಾರ್ಯಕರ್ತರು ಸೇರಿ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದಾಳಿ ವೇಳೆ ಅಗಲಿದ ಹಿಂದೂಗಳಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಮೆರವಣಿಗೆ ಉದ್ದಕ್ಕೂ. ಉಗ್ರರನ್ನು ರಕ್ಷಿಸುತ್ತಿರುವ ಪಾಕಿಸ್ತಾನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮೇರವಣಿಗೆ ಬಳಿಕ ಪಾಕಿಸ್ತಾನ ಧ್ವಜ ತುಳಿದು ಆಕ್ರೋಶ ಹೊರಹಾಕಿದ ಹಿಂದೂಪರ ಕಾರ್ಯಕರ್ತರು, ಉಗ್ರರ ಅಣಕು ಶವ ಹಾಗೂ ಪಾಕಿಸ್ತಾನ ಧ್ವಜಕ್ಕೆ ಬೆಂಕಿಯಿಟ್ಟರು.