Tuesday, April 29, 2025
Google search engine
Homeರಾಜ್ಯಜನಿವಾರಕ್ಕೆ ಅಪಮಾನ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಭಟನೆ
spot_img

ಜನಿವಾರಕ್ಕೆ ಅಪಮಾನ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಭಟನೆ

ಹುಕ್ಕೇರಿ : ಸಿ ಇ ಟಿ ಪರೀಕ್ಷೆ ಸಮಯದಲ್ಲಿ ಜನಿವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗುಸುವಂತೆ ಒತ್ತಾಯಿಸಿ ಹುಕ್ಕೇರಿ ತಾಲೂಕಾ ಬ್ರಾಹ್ಮಣ ಸಮುದಾಯದಿಂದ ಇಂದು ಪ್ರತಿಭಟನೆ ನಡೆಸಿ ಕೆಲ ಸಮಯ ಕೋರ್ಟ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಲಾಯಿತು. ನಂತರ ತಹಸಿಲ್ದಾರ ಮಂಜುಳಾ ನಾಯಿಕ  ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

  ಬ್ರಾಹ್ಮಣ ಸಮಾಜದ ಮುಖಂಡ ಗುರು ಕುಲಕರ್ಣಿ ಮಾತಮಾಡಿ    ಬೀದರ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಿಇಟಿ ಪರೀಕ್ಷಾ ಕೇಂದ್ರಗಳಲ್ಕಿ  ಕೆಇಎ ನಿರ್ದೆಶನ ಇಲ್ಲದಿದ್ದರೂ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ್ದಾರೆ,ಅಲ್ಲದೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸ ಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪದ್ಮನಾಭ ಪೋದ್ದಾರ, ಬಿ ಬಿ ರಜಪೂತ, ಜಯಸಿಂಗ ಸನದಿ, ಮೋಹನ ದೇಶಪಾಂಡೆ, ಬಾಹುಬಲಿ ನಾಗನೂರಿ, ಸಂಜೀವ ಮುತಾಲಿಕ, ವೀವೇಕ ಪುರಾಣಿಕ, ಗುರು ಕುಲಕರ್ಣಿ, ಡಾ, ರವೀಂದ್ರ ಬಡಿಗೇರ, ಗಜಾನನ ಬಡಿಗೇರ, ಹನಮಂತ ಇನಾಮದಾರ, ಪ್ರಕಾಶ ಮುತಾಲಿಕ, ಸಂಜೀವ ಮುತಾಲಿಕ, ಅರವಿಂದ ದೇಶಪಾಂಡೆ, ಪುಟ್ಟು ಖಾಡೆ, ಸಿದ್ದು ಬೆನಾಡಿಕರ ಮೊದಲಾದವರು ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular

error: Content is protected !!